ಮೈಸೂರು, ಡಿಸೆಂಬರ್ 12, 2019 (www.justkannada.in): ಈರುಳ್ಳಿ ಬೆಲೆ ದಿನೆ ದಿನೆ ಏರಿಕೆ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.
ಹೆಚ್ಚು ಈರುಳ್ಳಿ ದಾಸ್ತಾನು ಮಾಡದಂತೆ ಸೂಚನೆ ನೀಡಲಾಗಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳು ದಾಸ್ತಾನು ಮೇಲೆ ಮಿತಿ ಹೇರಲಾಗಿದೆ. ಸಗಟು ಈರುಳ್ಳಿ ಮಾರಾಟಗಾರರು 250 ಕ್ವಿಂಟಾಲ್ ಮಿತಿ. ಚಿಲ್ಲರೆ ವ್ಯಾಪಾರಿಗಳಿಗೆ 50 ಕ್ವಿಂಟಾಲ್ ಮಿತಿ ನಿಗದಿ ಮಾಡಿ ಸರ್ಕಾರದ ಆದೇಶ ಪಾಲಿಸಿಲುವಂತೆ ಜಿಲ್ಲಾಧಿಕಾರಿಗಳ ಸೂಚನೆ ನೀಡಲಾಗಿದೆ.
ಮಿತಿಗಿಂತೆ ಹೆಚ್ಚು ಈರುಳ್ಳು ಶೇಖರಣೆ ಮಾಡಿದವರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಪರವಾನಗೆ ಪಡೆಯುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ನಿರ್ದೇಶನ ನೀಡಿದ್ದಾರೆ.