ಮೈಸೂರು,ಫೆಬ್ರವರಿ,18,2025 (www.justkannada.in): ಮೈಸೂರಿನಲ್ಲಿ ನಿನ್ನೆ ತಾನೆ ಉದ್ಯಮಿಯೊಬ್ಬರು ತನ್ನ ಪತ್ನಿ ಮಗ ಹಾಗೂ ತಾಯಿಯನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.
ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಬಳಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅಣ್ಣ ಜೋಶಿ ಆಂಟೋನಿ, ಸಹೋದರ ಜೋಬಿ ಆಂಟೋನಿ, ಈತನ ಪತ್ನಿ ಸ್ವಾತಿ @ ಶರ್ಮಿಳಾ ಆತ್ಮಹತ್ಯೆಗೆ ಶರಣಾದವರು.
ನೆನ್ನೆ ಅಣ್ಣ ಬಲಿಯಾದರೇ ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದು ಆನ್ ಲೈನ್ ಗೇಮ್, ಹಣ ಡಬ್ಲಿಂಗ್ ಆಸೆಗೆ ಇಡೀ ಕುಟುಂಬವೇ ಸರ್ವನಾಶವಾಗಿದೆ. ಸಾವನ್ನಪ್ಪಿರುವವರು ಮೈಸೂರಿನ ವಿದ್ಯಾನಗರ ಹಾಗೂ ಯರಗನಹಳ್ಳಿ ನಿವಾಸಿಗಳಾಗಿದ್ದು, ಜೋಬಿ ಆಂಟೋನಿ ಹಾಗು ಜೋಷಿ ಆಂಟೋನಿ ಅವಳಿ-ಜವಳಿ ಎನ್ನಲಾಗಿದೆ.
ಜೋಬಿ ಆಂಟೋನಿ ದಂಪತಿ ಆನ್ ಲೈನ್ ಬೆಟ್ಟಿಂಗ್ ಗಾಗಿ 80 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ತಾಳಲಾರದೆ ನಿನ್ನೆ ಅಣ್ಣ ಜೋಷಿ ಆಂಟೋನಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ತಂಗಿಗೆ ಕಳುಹಿಸಿದ್ದ.
ತಂಗಿ ಮೇರಿ ಶರ್ಲೈನ್ ಅವಳಿಗೂ ಆತ್ಮಹತ್ಯೆ ಮಾಡಿಕೊ ಎಂದು ಪ್ರಚೋದಿಸಿದ್ದ. ಶರ್ಲೈನ್ ಮಗುವನ್ನು ಕೊಲ್ಲುವಂತೆ ಆತ್ಮಹತ್ಯೆಗೂ ಮುನ್ನ ಜೋಷಿ ಆಂಟೋನಿ ಪ್ರಚೋದಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ತಂಗಿ ಮೇರಿ ಶರ್ಲೈನ್ ಅವರು ಜೋಬಿ ಆಂಟೋನಿ ಹಾಗೂ ಸ್ವಾತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಿಸಿದ್ದರು. ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಿನ್ನೆ ಜೋಬಿ ಹಾಗೂ ಸ್ವಾತಿ ವಿರುದ್ಧ ಐಪಿಸಿ 306 ಅಡಿ ಕೇಸ್ ದಾಖಲಾಗಿತ್ತು. ಹೀಗಾಗಿ ಕೇಸ್ ಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Key words: Online betting, Three members, same family, Death, Mysore