ವಿಶೇಷಚೇತನ ಮಕ್ಕಳಿಗೆ ಹೊಡೆತ ನೀಡಿದ ‘ ಆನ್‌ಲೈನ್’ ಶಿಕ್ಷಣ ..!

 

ಬೆಂಗಳೂರು, ನವೆಂಬರ್ ೧೮, ೨೦೨೧ (www.justkannada.in): ಕೋವಿಡ್ ಸಾಂಕ್ರಾಮಿಕದಿಂದಾಗಿ ಶಿಕ್ಷಣ ಆನ್‌ಲೈನ್‌ಗೊಂಡ ಕಾರಣ ಅನೇಕ ಮಕ್ಕಳಿಗೆ ಕಲಿಕಾ ನಷ್ಟವುಂಟಾಯಿತು. ಆದರೆ ವಿಶೇಷಚೇತನ ಮಕ್ಕಳಿಗೆ ಈ ಸಾಂಕ್ರಾಮಿಕ ಹಾಗೂ ಆನ್‌ಲೈನ್ ಶಿಕ್ಷಣ ಹೆಚ್ಚಿನ ಹೊಡೆತವನ್ನೇ ನೀಡಿದೆ.

ಮಕ್ಕಳ ದಿನಾಚರಣೆಯಂದು ಬೆಂಗಳೂರಿನಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಅಗತ್ಯವಿರುವ ಮಕ್ಕಳು, ಸಮಾಜದಲ್ಲಿರುವ ಪ್ರತ್ಯೇಕತೆ ಹೆಚ್ಚು ಗಂಭೀರವಾದ ಹಿನ್ನೆಲೆಯಲ್ಲಿ ತಾವು ಅನುಭವಿಸಿದ ಆತಂಕ ಹಾಗೂ ಅಸಹಾಯಕತೆಯನ್ನು ಹೊರಹಾಕಿದರು.

ವಾಕ್ ಮತ್ತು ಶ್ರವಣ ದೋಷವಿರುವ ದಿವಾಕರ್ (೧೬) ಎಂಬ ಹೆಸರಿನ ೭ನೇ ತರಗತಿಯ ಓರ್ವ ವಿದ್ಯಾರ್ಥಿ, “ಸನ್ನೆ ಭಾಷೆಯಲ್ಲಿ ಸಂವಹನೆ ನಡೆಸುವಂತಹ ಸಿಬ್ಬಂದಿಗಳಿರುವ ಉತ್ತಮ ಸ್ಥಳಗಳೇ ಇಲ್ಲ,” ಎಂದು ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. “ಆನ್‌ಲೈನ್ ಶಿಕ್ಷಣ ಇನ್ನೂ ಬಹಳ ದಿನಗಳವರೆಗೆ ಹೀಗೆ ಮುಂದುವರೆಯಲಿದೆ ಎನಿಸುತ್ತದೆ. ಈ ಹೊಸ ರೀತಿಯ ಶಿಕ್ಷಣ ವೆಚ್ಚಗಳನ್ನು ಕಡಿಮೆಗೊಳಿಸಬಹುದು, ಆದರೆ ಇಲ್ಲಿ ಯಾವುದೇ ರೀತಿಯ ಶಾರೀರಿಕ ಒಳಗೊಳ್ಳುವಿಕೆ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಆತ್ಮೀಯತೆಯೇ ಇಲ್ಲ, ಹಾಗಾಗಿ ಇದು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗವುದಿಲ್ಲ,” ಎಂದರು.

ಸೆರೆಬ್ರೆಲ್ ಪಾಲ್ಸಿ (ಸಿಪಿ) ಸಮಸ್ಯೆಯಿಂದ ಬಳಲುತ್ತಿರುವ ೭ನೇ ತರಗತಿಯ ಮತ್ತೋರ್ವ ವಿದ್ಯಾರ್ಥಿನಿ ಅನುಪ್ರಿಯ ಅವರ ಅಭಿಪ್ರಾಯದ ಪ್ರಕಾರ, ಮಕ್ಕಳನ್ನು ಆನ್‌ಲೈನ್ ಕಲಿಕೆಯ ಕಡೆಗೆ ತಳ್ಳಿರುವುದು, ವಿಶೇಷವಾಗಿ ವಿಶೇಷಚೇತನ ಮಕ್ಕಳಿಗೆ ಹೆಚ್ಚಿನ ಸವಾಲನ್ನು ಒಡ್ಡಿದೆ.”
ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸ್‌ಎಬಿಲಿಟಿಸ್ (ಎಪಿಡಿ) ಎಂಬ ಸರ್ಕಾರೇತರ ಸಂಸ್ಥೆ, ಬೆಂಗಳೂರಿನ ಲಿಂಗರಾಜಪುರದಲ್ಲಿ ಆಯೋಜಿಸಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಆನ್‌ಲೈನ್ ಶಿಕ್ಷಣದ ಭವಿಷ್ಯ ಹಾಗೂ ಯಾವ ರೀತಿ ಕೆಲಸ ನಿರ್ವಹಿಸಲಿದೆ ಎಂಬ ಕುರಿತು ಹಲವಾರು ಪ್ರಶ್ನೆಗಳನ್ನು ವ್ಯಕ್ತಪಡಿಸಿದರು. ಸಿಪಿಯನ್ನು ಅಭಿವೃದ್ಧಿಪಡಿಸಿರುವ ನಾಲ್ಕನೆ ತರಗತಿಯ ವಿದ್ಯಾರ್ಥಿ ಧೃವ ಅವರ ಕಾಳಜಿಯೇನೆಂದರೆ, ಒಂದೇ ಒಂದು ಮೊಬೈಲ್ ಇರುವ ಮತ್ತು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿರುವ ಕುಟುಂಬಗಳಲ್ಲಿ ಮಕ್ಕಳು ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಏನು ಮಾಡಬೇಕು? ಎನ್ನುವುದು

“ನನಗೆ ೩ನೇ ತರಗತಿಯಲ್ಲಿ ಓದುತ್ತಿರುವ ಓರ್ವ ತಂಗಿ ಇದ್ದಾಳೆ. ಇಬ್ಬರಿಗೂ ಒಂದೇ ಸಮಯದಲ್ಲಿ ತರಗತಿಗಳಿದ್ದವು. ಹಾಗಾಗಿ ನನ್ನ ಮೊಬೈಲ್ ಪರದೆಯನ್ನು ನನ್ನ ತಂಗಿಯೊಂದಿಗೂ ಹಂಚಿಕೊಳ್ಳಬೇಕಾಗಿದ್ದ ಕಾರಣದಿಂದಾಗಿ ನನಗೆ ಕಲಿಯಲು ಕಷ್ಟವಾಯಿತು. ನನಗೆ ಮನೆಯಲ್ಲಿ ಕುಳಿತು ತುಂಬಾ ಬೇಸರವೂ ಆಗುತಿತ್ತು, ಏಕೆಂದರೆ ನನ್ನನ್ನು ಹೊರಗೆ ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ನನಗೆ ಪುಸ್ತಕಗಳನ್ನು ಓದಲು ಆಸೆ. ಆದರೆ ಶಾಲೆಯ ಗ್ರಂಥಾಲಯಗಳೂ ಸಹ ಮುಚ್ಚಿದ್ದವು, ಹಾಗಾಗಿ ಸಾಂಕ್ರಮಿಕದ ಸಮಯದಲ್ಲಿ ಏನೂ ಮಾಡಲಾಗಲಿಲ್ಲ,” ಎಂದರು.

ಸಾಂಕ್ರಾಮಿಕ ಮತ್ತೊಮ್ಮೆ ಮರುಕಳಿಸಿದರೆ ಅಥವಾ ಯಾವುದಾದರೂ ರೀತಿಯ ನೈಸರ್ಗಿಕ ವಿಕೋಪ ಅಥವಾ ದುರಾದೃಷ್ಟಕರವಾಗಿ ಲಾಕ್‌ಡೌನ್ ವಿಧಿಸಿದರೆ ತಾನು ಆ ಸನ್ನಿವೇಶವನ್ನು ಯಾವ ರೀತಿ ನಿರ್ವಹಿಸುವೆನೋ ಎಂದು ತನ್ನ ಕಾಳಜಿಯನ್ನು ಧೃವ ವ್ಯಕ್ತಪಡಿಸಿದ.
ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪದ್ಮಿನಿ (೧೪) ಹೇಳಿದ ಪ್ರಕಾರ ಅನೇಕ ವಿದ್ಯಾರ್ಥಿಗಳು ಶಿಕ್ಷಣ/ಕಲಿಕೆಯಿಂದ ವಂಚಿತರಾದರು, ಏಕೆಂದರೆ ಅವರ ಬಳಿ ಸ್ಮಾರ್ಟ್ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಿರಲಿಲ್ಲ ಹಾಗೂ ಅನೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳೂ ಸಹ ಸಮಸ್ಯೆಯನ್ನು ಉಂಟು ಮಾಡಿತು. “ಆನ್‌ಲೈನ್ ತರಗತಿಗಳ ಮೂಲಕ ನಮಗೆ ಆಗಿರುವ ಅನುಭವವೇನೆಂದರೆ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಯಾವುದೇ ಸಂಬಂಧವೇ ಇಲ್ಲ,” ಎನ್ನುವುದು ಎಂದರು.

ಈ ಸಂವಾದ ಕಾರ್ಯಕ್ರಮವನ್ನು ಎಪಿಡಿ, ಯುನಿಸೆಫ್ ಹಾಗೂ ಕರ್ನಾಟಕ ಚೈಲ್ಡ್ ರೈಟ್ಸ್ ಅಬ್ಸರ್ವೇಟರಿ (ಕೆಸಿಆರ್‌ಒ) ಜಂಟಿ ಸಹಯೋಗದಲ್ಲಿ ಆರೋಜಿಸಲಾಗಿತ್ತು. ಯುನಿಸೆಫ್, ಹೈದ್ರಾಬಾದ್ ಕಚೇರಿಯ ವಕಾಲತ್ತು ಹಾಗೂ ಸಂವಹನಾ ತಜ್ಞ ಪ್ರೊಸೂನ್ ಸೇನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರ, ಅಂತಾರಾಷ್ಟ್ರೀಯ ಏಜೆನ್ಸಿಗಳು ಹಾಗೂ ಸಮಾಜ ಈಗ, ಅಂದರೆ ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವಂತಹ ಸನ್ನಿವೇಶಗಳ ನಿರ್ವಹಣೆಯಲ್ಲಿ ಉತ್ತಮ ಅವಲೋಕನ ಹಾಗೂ ಕಲಿಕೆಯನ್ನು ಅನುಭವಿಸಿದ್ದು, ಈಗ ಉತ್ತಮ ರೀತಿಯಲ್ಲಿ ಸಜ್ಜಾಗಿದೆ, ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : online-education-special-children-suffered-a lot-need-of-the-hour-special-education