ಬೆಳಗಾವಿ,ಡಿಸೆಂಬರ್,2,2021(www.justkannada.in): ಡಿಸೆಂಬರ್ 13ರಂದು ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದ್ದು. ವಿದ್ಯಾರ್ಥಿಗಳಿಗೆ ಅಧಿವೇಶನ ನೋಡಲು ಬರಲು ಅವಕಾಶ ಇಲ್ಲ, ಸಾರ್ವಜನಿಕರಿಗೆ ಮಾತ್ರ ಅವಕಾಶ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಡಿಸೆಂಬರ್ 13ರಂದು ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ಹಿನ್ನೆಲೆ ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೀತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಅಧಿವೇಶನ ನಡೆಸಲಾಗಲಿಲ್ಲ. ಅಧಿವೇಶನ ನಡೆಸಲು ಅನೇಕ ಸವಾಲುಗಳಿವೆ. ಕೋವಿಡ್ ಬೇರೆ ಬೇರೆ ಸ್ಥಿತಿಗಳು ಸಾಕಷ್ಟು ಆತಂಕ ತಂದಿವೆ. ನಾವು ಸಮಾಲೋಚನೆ ನಡೆಸಿದಾಗ ಅಧಿವೇಶನ ನಡೆಸಲು ತೀರ್ಮಾನದಲ್ಲಿದ್ದೇವೆ. ಕೋವಿಡ್ ನಿಯಂತ್ರಣದಲ್ಲಿ ಇರಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸಿದ್ಧತೆ ಮಾಡಿ ಮುನ್ನಡೆಯುತ್ತೇವೆ. ಕೋವಿಡ್ ನಿಯಂತ್ರಣದಲ್ಲಿ ಇರುತ್ತೆ ಎಂಬ ವಿಶ್ವಾಸ ಇದೆ ಎಂದರು.
ಅತಿವೃಷ್ಟಿಯಿಂದ ಆದಂತಹ ಕಷ್ಟದ ಸಂದರ್ಭವೂ ಇದೆ. ಅತಿವೃಷ್ಟಿ ಪರಿಹಾರ ಸಮರ್ಥವಾಗಿ ಮಾಡಲು ಹೇಳಿದ್ದೇವೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪರಿಷತ್ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಜಿಲ್ಲಾಡಳಿತ ಮೇಲೆ ದೊಡ್ಡ ಜವಾಬ್ದಾರಿ ಇದ್ದು ಆ ಸವಾಲವೂ ಇದೆ. ಈ ಅಧಿವೇಶನ ಚೆನ್ನಾಗಿ ನಡೆಸುವ ಸವಾಲು ನಮ್ಮ ಮುಂದೆ ಇದೆ. ಇದನ್ನ ಸವಾಲಾಗಿ ಸ್ವೀಕರಿಸಿ ಜಿಲ್ಲಾಡಳಿತ ಜೊತೆ ಪೂರ್ವ ಸಿದ್ಧತೆ ಸಭೆ. ಶಾಸಕರು, ಸಿಬ್ಬಂದಿ, ಅಧಿಕಾರಿ ವರ್ಗ, ಮಾಧ್ಯಮ ಸಿಬ್ಬಂದಿ ವಸತಿಗೆ ವ್ಯವಸ್ಥೆ ನಡೆದಿದೆ. ಆಹಾರದ ವ್ಯವಸ್ಥೆಯೂ ಅತಿ ಮುಖ್ಯ, ಜವಾಬ್ದಾರಿಯುತವಾಗಿ ಮಾಡಲು ಸೂಚನೆನೀಡಲಾಗಿದೆ. ಎಲ್ಲರೂ ವ್ಯವಸ್ಥಿತವಾಗಿ ಸದನಕ್ಕೆ ಬರಲು ಹೋಗಲು ಸಕಲ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೂ ನೂರಾರು ಕೆಲಸಗಳು ಇವೆ, ಅಧಿಕಾರಿಗಳು ಮಾಡ್ತಿದ್ದಾರೆ. ಎಲ್ಲರೂ ಪೂರ್ವಭಾವಿ ಸಿದ್ಧತೆ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಧಿವೇಶನ ನೋಡಲು ಬರಲು ಅವಕಾಶ ಇಲ್ಲ, ಸಾರ್ವಜನಿಕರಿಗೆ ಇದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
ಹತ್ತು ದಿನಗಳಲ್ಲಿ ಎಲ್ಲಾ ಕಲಾಪಗಳು, ನಿಲುವಳಿ ಸೂಚನೆ, ಚರ್ಚೆ ವಿಷಯ ಎಲ್ಲಾ ಕಾರ್ಯಕಲಾಪ ವ್ಯವಸ್ಥಿತವಾಗಿ ನಡೆಯುತ್ತೆ. ಸರ್ಕಾರದಿಂದ ಈವರೆಗೂ ಯಾವುದೂ ಬಿಲ್ ಬಂದಿಲ್ಲ, ಇನ್ನೂ ಅವಕಾಶ ಇದೆ. ಒಂದು ವಾರದ ಮುಂಚೆ ಬಿಲ್ ಮಂಡಿಸುವುದಿದ್ರೆ ಕಳಿಸಲು ಸೂಚನೆ ನೀಡಲಾಗಿದೆ. ಒಂದು ಆರ್ಡಿನೆನ್ಸ್ ಇದೇ ಅದು ಆಗಲೇಬೇಕು. ಕಲಾಪ ಚೆನ್ನಾಗಿ ನಡೆಸುವ ಪ್ರಯತ್ನ ಮಾಡ್ತೀವಿ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸುವ ನಿರೀಕ್ಷೆ ಸಾರ್ವಜನಿಕರಿಗಿದೆ ಎಂದರು.
ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಗಳಿಗೆ ಶಕ್ತಿ ತುಂಬುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮನ್ನ ಸಾವಿರ ಸಾವಿರ ಕಣ್ಣುಗಳು ನೋಡ್ತಿರುತ್ತೆ. ಸದನದಲ್ಲಿ ಹೇಗೆ ಚರ್ಚೆ ನಡೆಯುತ್ತೆ ಅಂತಾ ನೋಡ್ತಿರ್ತಾರೆ. ವಿಚಾರದ ಸಿದ್ಧಾಂತದ, ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ನಮ್ಮ ಚೌಕಟ್ಟಿನಲ್ಲಿ ಕಲಾಪ ನಡೀಬೇಕು, ಚೌಕಟ್ಟು ಮೀರಿದ್ರೆ ಕ್ರಮ ಕೈಗೊಳ್ಳಲು ಸಂವಿಧಾನ ನಮಗೆ ಅವಕಾಶ ನೀಡಿದೆ. ಸದನದಲ್ಲಿ ಚರ್ಚೆ ಫಲಪ್ರದ ಆಗಬೇಕು ಅದಕ್ಕೆ ವ್ಯವಸ್ಥೆ ಮಾಡೋ ಜವಾಬ್ದಾರಿ ಇದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
ಈಗ ನಡೆಯುವ ಲೋಕಸಭೆ, ರಾಜ್ಯಸಭಾ ಚಟುವಟಿಕೆ ಸ್ಪೀಕರ್ ಆದ ನನಗೆ ನೋವು ತರ್ತಿದೆ. ರಾಜ್ಯಸಭೆಯಲ್ಲಿ ಹೀಗೆ ನಡೆದ್ರೆ ವಿಧಾನಸಭೆಯಲ್ಲಿ ಹೇಗೆ ಎಂಬ ಆತಂಕ ಇದೆ. ಲೋಕಸಭೆಯಲ್ಲಿ ಕೈಗೊಂಡ ಕ್ರಮಕ್ಕೆ ಸ್ವಾಗತಿಸುತ್ತೇನೆ. ನಾನು ಎಲ್ಲಾ ಸದಸ್ಯರಲ್ಲಿ ವಿನಂತಿ ಮಾಡ್ತೇನೆ. ಎಲ್ಲಾ ಸಚಿವರಿಗೂ ಹೇಳಲು ಬಯಸುತ್ತೇನೆ, ಕಡ್ಡಾಯವಾಗಿ ಪ್ರಿಪೇರ್ ಆಗಿ ಭಾಗವಹಿಸಿ. ನಮ್ಮ ರಾಜ್ಯ ಜನರ ಅಭಿವೃದ್ಧಿ ಪರವಾಗಿ ಇದೆ ಎಂದು ನಾವು ಹೋಗಬೇಕು. ಡಿ.4 ಹಾಗೂ 5ಕ್ಕೆ ಸಾರ್ವಜನಿಕ ಲೆಕ್ಕ ಸಮಿತಿ ಒಳಗೊಂಡಂತೆ ಸ್ಪೀಕರ್, ಸಭಾಪತಿ ಸಮಾವೇಶ ಇದೆ. ಆ ಸಮಾವೇಶಕ್ಕೆ ನಾವು ಹೋಗ್ತೀವಿ. ಜನರ ಭಾವನೆ ತಕ್ಕಂತೆ ಸದನ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ವಿಷಯಗಳಲ್ಲಿ ಸಾವಿರ ಭಿನ್ನಾಭಿಪ್ರಾಯ ಇರುತ್ತದೆ. ಸದನದಲ್ಲಿ ಅಶಿಸ್ತಾಗಿ ವರ್ತಿಸೋದು ಯಾರಿಗೂ ಶೋಭೆ ತರಲ್ಲ. ಅಶಿಸ್ತಿನಿಂದ ವರ್ತಿಸಬಾರದು, ಭಿನ್ನಾಭಿಪ್ರಾಯ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಲಿ. ಕೆಲವರು ನನಗೂ ಮನವಿ ಕೊಟ್ಟಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
Key words: only -chance – public – session- not – students-Speaker-vishwaswara hegde Kageri.