ಮೈಸೂರು,ಡಿಸೆಂಬರ್,09,2020(www.justkannada.in) : ರೇಡಿಯೋ ತನ್ನದೇಯಾದ ರೀತಿಯಲ್ಲಿ ಜನರಿಗೆ ಶಿಕ್ಷಣ, ಮನರಂಜನೆ, ಮಾಹಿತಿ ಒದಗಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಏಕೈಕ ಮಾಧ್ಯಮ ರೇಡಿಯೊ ಮಾಧ್ಯಮವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮೈಸೂರು ವಿವಿ ಸಮುದಾಯ ರೇಡಿಯೋ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಕೋವಿಡ್-19 ಸಮಯದಲ್ಲಿ ಸಮುದಾಯ ರೇಡಿಯೋದ ಪಾತ್ರ’ ವಿಷಯ ಕುರಿತ ವೆಬಿನಾರ್ ಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್-19ರ ಸಮಯದಲ್ಲಿ ಸಮುದಾಯ ರೇಡಿಯೊ ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ತಂತ್ರಜ್ಞಾನದಲ್ಲಿ ಪ್ರತಿ ವರ್ಷ ಅನೇಕ ಬದಲಾವಣೆಯಾಗುತ್ತದೆ. ಮಾಧ್ಯಮದಲ್ಲಿ ತಂತ್ರಜ್ಞಾನದಲ್ಲಿ ಉಳಿದೆಲ್ಲ ತಂತ್ರಜ್ಞಾನಗಳಿಗಿಂತ ಹೆಚ್ಚಿನ ಬದಲಾವಣೆಯನ್ನು ಕಾಣುತ್ತೇವೆ ಎಂದರು.
ಮಾಧ್ಯಮಗಳು ತಮ್ಮ ಕಾರ್ಯಾಚರಣೆಯ ಕ್ಷೇತ್ರದಲ್ಲಿ ತಮ್ಮದೇಯಾದ ಪ್ರಾಮುಖ್ಯತೆ ಹೊಂದಿದ್ದು, ಸಮಾಜಕ್ಕೆ ಮಾಧ್ಯಮಗಳ ಕೊಡುಗೆಯು ಅಪಾರವಾಗಿದೆ. ಈ ನಿಟ್ಟಿನಲ್ಲಿ ರೇಡಿಯೊದ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ರೇಡಿಯೋ ಬೆಳವಣಿಗೆಯು ದೇಶದಲ್ಲಿ ಮುಂದೆ ಸಾಗುತ್ತಿದೆ. ಸಮುದಾಯ ರೇಡಿಯೊ 2000 ದಶಕದ ಆರಂಭದಲ್ಲಿ ಪ್ರವೇಶಿಸಿದ್ದು, ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತಿದೆ. ದೇಶಾದ್ಯಂತ 251ಕ್ಕೂ ಹೆಚ್ಚು ಕೇಂದ್ರಗಳು ಸೇವೆ ಸಲ್ಲಿಸುತ್ತಿದ್ದು, ಇವುಗಳ ಕೊಡುಗೆ ಅಪಾರ ಎಂದರು.
ಸಮುದಾಯದ ಸದಸ್ಯರನ್ನು ಶಿಕ್ಷಣ, ಸಂಸ್ಕೃತಿ, ಆರೋಗ್ಯ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸಬಲೀಕರಣಗೊಳಿಸುವ ಕಾರ್ಯವಾಗುತ್ತಿದೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರೇಡಿಯೋ ಉತ್ತಮ ಮಾಧ್ಯಮ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಹಿತಿ ನೀಡಿದರು.
ಈ ರೀತಿಯ ವೆಬಿನಾರ್ ಗಳ ಮೂಲಕ ರೇಡಿಯೋ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕಿದೆ. ರೇಡಿಯೋ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಯುನೆಸ್ಕೋ ಸಹ ಅಧ್ಯಾಪಕಿ, ಹೈದ್ರಾಬಾದ್ ವಿವಿ ಸಮುದಾಯ ರೇಡಿಯೋ ಮುಖ್ಯಸ್ಥೆ ಪ್ರೊ. ಕಾಂಚನ ಮಲ್ಲಿಕ್, ಕುಲಪತಿ ವಿಶೇಷಾಧಿಕಾರಿ ಡಾ.ಚೇತನ್, ಪ್ರೊ.ನಿರಂಜನ್ ವಾನಳ್ಳಿ, ಮೈಸೂರು ವಿವಿ ಸಿಆರ್ ಎಸ್ ಸಹ ಸಂಯೋಜಕಿ ಡಾ.ಎಂ.ಎಸ್.ಸಪ್ನಾ ಇತರರು ಹಾಜರಿದ್ದರು.
English summary….
Radio is the only medium which functions even during natural calamities: MU VC
Mysuru, Dec. 09, 2020 (www.justkannada.in): “Radio has been serving the people through education, entertainment, and providing useful information in its own way continuously for decades. It is the only medium which functions even during natural calamities,” opined Prof. G. Hemanth Kumar, Vice-Chancellor, Mysore University.
He participated in a virtual webinar on the topic, “Role of Community Radio during COVID-19 pandemic time,” organised by the Community Radio Centre, Mysore University.
“The concept of Community Radio was introduced in 2000 and has been striving for the development of the community. There are more than 251 centers across the country and its services and contribution to the society is immense,” he added.
“Radio has proven itself as the only medium that has been successful in strengthening the community members in the areas of education, culture, health, and development even during COVID-19 pandemic time,” he explained.
Prof. Kanchana Mallik, Head, Hyderabad University Community Radio Department, and UNESCO Assistant Lecturer, Dr. Chetan, Chancellor, and Special Officer, Prof. Niranjan Vanalli, Dr. M.S. Swapna and others participated.
Keyword: Community Radio/ webinar/ Mysore University
key words : only-media-radio-where-natural-disasters-occur-Chancellor-Prof-G.Hemant Kumar