ಮೈಸೂರು,ಸೆಪ್ಟಂಬರ್,1,2023(www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದಲ್ಲಿ ಆನ್ ಲೈನ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ತೆರೆಯಲು ತೀರ್ಮಾನಿಸಿದೆ. ಇದಕ್ಕೆ ಯುಜಿಸಿಯಿಂದ ಅನುಮತಿ ಸಹ ಪಡೆದಿದೆ ಎಂದು VTU ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.
ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ ಭಾರತದ ಅತಿ ದೊಡ್ಡ ತಾಂತ್ರಿಕ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ 25ವರ್ಷ ಪೂರೈಸಿ 26ನೇ ವರ್ಷಕ್ಕೆ ಕಾಲಿಟ್ಟಿದೆ. ಇದೀಗ ಆನ್ ಲೈನ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ತೆರೆಯಲು ತೀರ್ಮಾನಿಸಿದೆ. VTU ನಲ್ಲಿ ಆನ್ ಲೈನ್ ಪ್ರೋಗ್ರಾಮ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಈಗಾಗಲೇ ದಾಖಲಾತಿಗಳನ್ನ ಆರಂಭಿಸಲಾಗಿದ್ದು ಸೆಪ್ಟೆಂಬರ್ 30ರ ತನಕ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾಖಲಾತಿ, ಶುಲ್ಕ ಪಾವತಿ, ತರಗತಿ, ಪಠ್ಯ ಸಾಮಗ್ರಿಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜಾಬ್ ಒರಿಯೆಂಟೆಡ್ ಕೋರ್ಸ್ ಗಳನ್ನ ತೆರೆಯಲಾಗಿದ್ದು. ದಾಖಲಾತಿ ಶುಲ್ಕದಲ್ಲಿ ಶೇಕಡಾ 60ರಿಂದ 70 ರಷ್ಟು ರಿಯಾಯಿತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ಬ್ರಾಂಚ್ ತೆರೆಯಲು ತೀರ್ಮಾನಿಸಲಾಗಿದೆ ಎಂದು ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.
Key words: open- Degree- PG-Course –VTU-VC- Prof. S. Vidyashankar