ಮೈಸೂರು,ಸೆಪ್ಟಂಬರ್,30,2020(www.justkannada.in): ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಅಂತರರಾಜ್ಯ ಗಾಂಜಾ ಸಾಗಣೆದಾರರರನ್ನ ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮಹಮ್ಮದ್ ಶಾಫಿ, ಸಲೀಂ, ಪಫಿ, ಇಬ್ರಾಹಿಂ ಕುಟ್ಟಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಗೂಡ್ಸ್ ವಾಹನದಲ್ಲಿ ಟೊಮೊಟೊ ಕ್ರೆಟ್ ಗಳ ಮದ್ಯೆ ಗಾಂಜಾ ಸಾಗಿಸುತ್ತಿದ್ದರು.
ಈ ಕುರಿತು ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ .ಬಿ ರಿಷ್ಯಂತ್, ಗಾಂಜಾ ಸಾಗಿಸುತ್ತಿದ್ದ ಕೇರಳ ಮೂಲದ ಮಹಮ್ಮದ್ ಶಾಫಿ, ಸಲೀಂ, ಪಫಿ, ಇಬ್ರಾಹಿಂ ಕುಟ್ಟಿ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ.ಹೆಚ್ವಿನ ವಿಚಾರಣೆಗೆ ನ್ಯಾಯಲಯದಿಂದ ಮತ್ತೆ ಪೋಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಲಾಗಿತ್ತು. ಮೈಸೂರು ನಂಜನಗೂಡು ಹೆದ್ದಾರಿಯಲ್ಲಿರುವ ಏರ್ಪೋರ್ಟ್ ಬಳಿ ತಪಾಸಣೆ ಮಾಡಲಾಗಿತ್ತು. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬಂಧಿತರಿಂದ 86 ಕೆಜಿ 300 ಗ್ರಾಂ ಗಾಂಜಾ ಹಾಗೂ ವಾಹನ ವಶ ಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಎಸ್ಪಿ ರಿಷ್ಯಂತ್ ತಿಳಿಸಿದರು.
key words: Operation – Mysore- District –Police-four – arrest- marijuana.