ಮೈಸೂರು,ಡಿ,28,2019(www.justkannada.in): ವಾಹನಗಳಲ್ಲಿ ನಿಯಮ ಬಾಹಿರವಾಗಿ ಹಾಕಲಾಗಿದ್ದ ನಂಬರ್ ಪ್ಲೇಟ್ ಮೇಲಿನ ಲೋಗೋ, ಚಿಹ್ನೆಗಳನ್ನ ಮೈಸೂರು ನಗರದಲ್ಲಿ ಆರ್ ಟಿ ಓ ಅಧಿಕಾರಿಗಳು ಕಾರ್ಯಚಾರಣೆ ನಡೆಸಿ ತೆರವುಗೊಳಿಸಿದರು.
ನಿಯಮ ಬಾಹಿರ ನಂಬರ್ ಪ್ಲೇಟ್ ವಿರುದ್ದ ಸಮರ ಸಾರಿ ಮೈಸೂರಿನಲ್ಲಿ ಬೀದಿಗಿಳಿದ ಆರ್.ಟಿ.ಓ ಅಧಿಕಾರಿಗಳು ಕೇಂದ್ರ ಮೋಟಾರು ಕಾಯ್ದೆ ಅನ್ವಯ ದಾಳಿ ನಡೆಸಿ ನಿಯಮ ಬಾಹಿರವಾಗಿ ನಂಬರ್ ಪ್ಲೇಟ್ ನ ಮೇಲೆ ಹಾಕಲಾಗಿದ್ದ ಸಂಘ/ಸಂಸ್ಥೆಯ ಹೆಸರು, ಲೋಗೋ, ಚಿಹ್ನೆಗಳನ್ನ ತೆರುವುಗೊಳಿಸಿದರು.
ಮೋಟಾರು ಕಾಯ್ದೆಯ ಪ್ರಕಾರ ನಂಬರ್ ಪ್ಲೇಟ್ ನ ಜೊತೆಗೆ ಯಾವುದೇ ಚಿಹ್ನೆ ಬಳಸದಂತೆ ಸೂಚನೆ ನೀಡಲಾಗಿತ್ತು. ಸೂಚನೆ ಇದ್ರೂ ಸಹ ವಾಹನ ಮಾಲೀಕರು ನಂಬರ್ ಪ್ಲೇಟ್ ಮೇಲೆ ಚಿಹ್ನೆ ಹಾಕಿಸಿಕೊಂಡಿದ್ದರು. ಈಗಾಗಿ ಮೈಸೂರಿನಲ್ಲೂ ಮೋಟಾರು ಕಾಯ್ದೆ ಜಾರಿಗೆ ಮುಂದಾದ ಆರ್.ಟಿ.ಓ ಅಧಿಕಾರಿಗಳು, ಸ್ಥಳದಲ್ಲಿಯೇ ನಂಬರ್ ಪ್ಲೇಟ್ ಜೊತೆ ಇರುವ ನಾಮಫಲಕಗಳನ್ನು ತೆರವು ಮಾಡಿದರು. ಹೈಕೋರ್ಟಿನ ಆದೇಶದ ಮೇರೆಗೆ ಮೈಸೂರಿನಲ್ಲಿ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆಯನ್ನ ಕಾರ್ಯರೂಪಕ್ಕೆ ತಂದರು.
Key words: Operation – RTO Officers – Mysore- number plate-logo-clearing