ಮೈಸೂರು,ಡಿಸೆಂಬರ್,16,2020(www.justkannada.in): ದೇಶದಲ್ಲಿ ಮುಸ್ಲಿಂ ಸಮುದಾಯ ಓಬಿಸಿ ಗೆ ಸೇರುವುದನ್ನ ವಿರೋಧಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ರಾವ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ರಾವ್, ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಮುಂದಾಗಿದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜಸ್ಟಿಸ್ ರೋಹಿಣಿ ಆಯೋಗದ ಶಿಫಾರಸಿನ ಅನ್ವಯ ದೇಶದ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮೀನುಗಾರಿಕೆ ಸಮುದಾಯದವರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಜಸ್ಟಿಸ್ ರೋಹಿಣಿ ಆಯೋಗ ನೀಡಿರುವ ವರದಿಯನ್ನು ದೇಶಾದ್ಯಂತ ವೈಜ್ಞಾನಿಕ ಸಮೀಕ್ಷೆ ನಡೆಸಿ ಲೋಕಸಭಾ ಹಾಗೂ ರಾಜ್ಯಸಭೆಗಳಲ್ಲಿ ಚರ್ಚಿಸಿ ಅನುಷ್ಠಾನಗೊಳಿಸುತ್ತೇವೆ ಎಂದರು.
ಕಳೆದ 6 ವರ್ಷಗಳಲ್ಲಿ ಕೇಂದ್ರೀಯ ವಿದ್ಯಾಲಯ, ಕಾನೂನು ವಿದ್ಯಾಲಯ, ನವೋದಯ ಶಾಲೆ ಹಾಗೂ ಸೈನಿಕ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ 72 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಇದು 72 ವರ್ಷದ ಬಳಿಕ ದೇಶದಲ್ಲೇ ಬದಲಾವಣೆ ಕಾಣಲು ಸಾಧ್ಯವಾಗಿದೆ. ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಹಲವಾರು ಸಮುದಾಯದ ಎಲ್ಲಾ ಬಡವರಿಗೆ ಮೀಸಲಾತಿ ನೀಡಿದ್ದಾರೆ ಎಂದು ಲಕ್ಷ್ಮಣ್ ರಾವ್ ಶ್ಲಾಘಿಸಿದರು.
ಒನ್ ನೇಷನ್ ಒನ್ ಮಾರ್ಕೆಟ್” ಮಾಡುವ ಕಲ್ಪನೆ ಮೋದಿಯವರದ್ದು…
ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮೋದಿ ಸರ್ಕಾರ ಹೆಜ್ಜೆಯಿಡುತ್ತಿದೆ. ಹೊಸ ಕೃಷಿನೀತಿಯಿಂದ ಜಾಗತಿಕವಾಗಿ ರೈತರು ಆರ್ಥಿಕವಾಗಿ ಲಾಭಗಳಿಸಲು ಸಾಧ್ಯ. ಹೀಗಾಗಿ “ಒನ್ ನೇಷನ್ ಒನ್ ಮಾರ್ಕೆಟ್” ಮಾಡುವ ಕಲ್ಪನೆ ಮೋದಿಯವರದ್ದಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ದೇಶದ ಇತರ ಬಿಜೆಪಿ ವಿರೋಧಿ ಪಕ್ಷಗಳು ರೈತರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ರೈತರಿಗೆ ಕಾಯ್ದೆಯ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಕಾಯ್ದೆಯ ಲೋಪದೋಷಗಳನ್ನ ತಿಳಿಸಿ ನಾವು ಚರ್ಚೆಗೆ ಬರಲು ಸಿದ್ದ…
ದಿನವೂ ದುಡಿಯುವ ರೈತ ವರ್ಗ ಬಡವರಾಗಿಯೇ ಉಳಿದಿದ್ದಾರೆ ಆದರೆ ದಲ್ಲಾಳಿಗಳು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಕೃಷಿ ಮಾರುಕಟ್ಟೆ ಡಿಜಿಟಲೈಜ್ ಆಗಲಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಿ ರೈತರ ಕೈ ಹಿಡಿಯುವುದೇ ಮೋದಿ ಸರ್ಕಾರದ ಉದ್ದೇಶ. ಆದರೆ ದೆಹಲಿಯ ರೈತ ಪ್ರತಿಭಟನೆ ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆ. ಕೃಷಿ ಕಾಯ್ದೆಯ ಬಗ್ಗೆ ಪ್ರತಿಭಟನಾಕಾರರು ಕಾಯ್ದೆಯ ಲೋಪದೋಷಗಳನ್ನ ತಿಳಿಸಿ ನಾವು ಚರ್ಚೆಗೆ ಬರಲು ಸಿದ್ದ ಎಂದು ಬಿಜೆಪಿಯ ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ರಾವ್ ಹೇಳಿದರು.
English summary…
We oppose inclusion of Muslims in OBC category: BJP National OBC Morcha President Lakshmanrao
Mysuru, Dec. 16, 2020 (www.justkannada.in): BJP National OBC Morcha President Lakshman Rao has said they will oppose the inclusion of Muslims in the OBC category.
Addressing a press meet in Mysuru today, he said that the Government of India has contemplated providing 10% reservation to the people who are economically backward of all the communities. Prime Minister Narendra Modi led government has been giving stress development of the backward castes since when it has come to power in the center. Preference is being given to backward castes as per the recommendations of the Justice Rohini Commission. Special facilities have been extended, especially to the fishing community. “We will implement the Justice Rohini Commission recommendations after conducting a thorough scientific survey across the country and discussing it in the lower and upper houses,” he said.
Keywords: BJP National OBC Morcha/ Muslims/ OBC category
Key words: opposed – addition – Muslim community – OBC- BJP- National OBC Morcha –Chairman- Laxman Rao-mysore