ಮೈಸೂರು,ಮೇ,9,2019(www.justkannada.in): ಪ್ರಾಣಿಗಳ ಮಾಂಸ ತ್ಯಾಜ್ಯದಿಂದ ಪಶು ಆಹಾರ ತಯಾರು ಘಟಕ ಸ್ಥಾಪನೆಗೆ ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿರುವ ಹಿನ್ನೆಲೆ, ಈ ನೂತನ ಯೋಜನೆಗೆ ಮಾಜಿ ಮೇಯರ್ ಗಳಾದ ಬಿ.ಎಲ್.ಭೈರಪ್ಪ, ಪುರುಷೋತ್ತಮ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಗಳಾದ ಬಿ.ಎಲ್.ಭೈರಪ್ಪ, ಪುರುಷೋತ್ತಮ್, ನಮ್ಮ ಸಂಪ್ರದಾಯದಲ್ಲಿ ಗೊವುಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಗೋವುಗಳನ್ನು ದೇವರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ ಗೋವುಗಳನ್ನು ಕೂಡಾ ಮಾಂಸಹಾರಿ ಮಾಡಲು ಹೊರಟಿರುವುದು ವಿಪರ್ಯಾಸ. ನಗರದ ವಿದ್ಯಾರಣ್ಯ ಪುರಂನಲ್ಲಿ ಪ್ರಾಣಿತ್ಯಾಜ್ಯಗಳಿಂದ ಪಶು ಆಹಾರ ತಯಾರಿಕಾ ಘಟಕ ಮಾಡಲು ತೀರ್ಮಾನ ಮಾಡಿರುವುದು ಅವೈಜ್ಞಾನಿಕವಾದದ್ದು. ಇನ್ನೊಂದೆಡೆ ಪಶು ಆರೋಗ್ಯ ಇಲಾಖೆ ನಿರ್ದೇಶಕರು ಆ ಜಾಗದಲ್ಲಿ ಮೀನು ಆಹಾರ ತಯಾರಿಕಾ ಘಟಕ ನಿರ್ಮಾಣ ಮಾಡಲಾಗುವುದು ಎನ್ನುತ್ತಾರೆ. ಈ ಇಬ್ಬರೂ ಹೇಳಿಕೆಗಳಲ್ಲೇ ಗೊಂದಲ ಇದೆ. ಆದರೆ ವಿದ್ಯಾರಣ್ಯ ಪುರಂನ ಸಾರ್ವಜನಿಕರು ಸುಯೇಜ್ ಫಾರಂನ ವಾಸನೆಯಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಎರಡೂ ಘಟಕಗಳು ಕೂಡಾ ಇಲ್ಲಿಯೇ ನಿರ್ಮಾಣವಾದರೆ ಅಲ್ಲಿನ ನಿವಾಸಿಗಳ ಆರೋಗ್ಯದ ಗತಿಯೇನು..? ಎಂದು ಪ್ರಶ್ನಿಸಿದರು.
ಕೂಡಲೇ ಪಾಲಿಕೆ ಆಯುಕ್ತರು ಹಾಗೂ ಪಶುವೈದ್ಯಾಧಿಕಾರಿಗಳು ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿದ ಅವರು,. ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಈ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ನುರಿತ ತಜ್ಞರಿಂದ ಇದರ ಬಗ್ಗೆ ಸಂಶೋಧನೆ ನಡೆಸಿ ಯೋಜನೆ ಬಗ್ಗೆ ಚಿಂತಿಸಬೇಕು. ಈ ಯೋಜನೆ ಮುಂದುವರೆಸಿದ್ದೇ ಆದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Key words: Opposition – former Mayor – Mysore -City Corporation- new project.