ಕೊಪ್ಪಳ,ಜೂನ್,24,2021(www.justkannada.in): ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಯಾಗುತ್ತಿದ್ದು ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ಧಾಟ ನಡೆದಿದೆ ಎನ್ನಲಾಗಿದೆ. ಇನ್ನು ಹಲವು ಶಾಸಕರು ಸಿದ್ಧರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆಯನ್ನ ನೀಡಿದ್ದು ಸಾಕಷ್ಟು ಗೊಂದಲ ಉಂಟು ಮಾಡಿದೆ. ಈ ಮಧ್ಯೆ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸಹ ಪರೋಕ್ಷವಾಗಿ ತಾನೂ ಸಿಎಂ ಅಭ್ಯರ್ಥಿ ಎಂದಿದ್ದಾರೆ.
ನನಗೂ ಸಾಕಷ್ಟು ಅಭಿಮಾನಿಗಳಿದ್ದಾರೆ. ನಾನು ಸಿಎಂ ಆಗಲು ಯೋಗ್ಯ ಎಂದಿದ್ದಾರೆ. ಆದರೆ ಸಿಎಲ್ ಪಿ ಸಭೆಯಲ್ಲಿ ಸಿಎಂ ಅಭ್ಯರ್ಥಿ ಅಂತಿಮವಾಗುತ್ತೆ ಎಂದು ಹೇಳುವ ಮೂಲಕ ತಾನೂ ಸಿಎಂ ಅಭ್ಯರ್ಥಿ ಎಂದು ಎಸ್.ಆರ್ ಪಾಟೀಲ್ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಎಸ್.ಆರ್ ಪಾಟೀಲ್, ಮೊದಲು ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು. ನಮ್ಮಲ್ಲಿ ಅರ್ಧ ಡಜನ್ ನಷ್ಟು ಸಿಎಂ ಅಭ್ಯರ್ಥಿಗಳಿದ್ದಾರೆ. ಆದರೆ ಬಿಜೆಪಿಯಲ್ಲಿ ಬಿಎಸ್ ವೈ ಹೋದ ಬಳಿಕ ಬಿಜೆಪಿಗೆ ದಿಕ್ಕುದೆಸೆ ಇಲ್ಲ ಎಂದು ಟೀಕಿಸಿದರು.
ಬಿಜೆಪಿಯದ್ಧು ಚರ್ಮಗೇಡಿ ಸರ್ಕಾರ. ದಪ್ಪ ಚರ್ಮದ ಸರ್ಕಾರ. ಸಿದ್ಧರಾಮಯ್ಯ 5 ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ನಮ್ಮಲ್ಲಿ ಬಹಳ ಜನ ಸಿಎಂ ಆಕಾಂಕ್ಷಿಗಳಿದ್ದಾರೆ. ಆದರೆ ಮುಂದಿನ ಸಿಎಂ ಸ್ಥಾನದ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಎಸ್.ಆರ್ ಪಾಟೀಲ್ ತಿಳಿಸಿದರು.
Key words: Opposition leader -SR Patil – CM- candidate- indirectly.