ಮೈಸೂರು,ನ,13,2019(www.justkannada.in): ಅಕ್ಷಯಪಾತ್ರೆ ಫೌಂಡೇಶನ್ ಗೆ ಬಿಸಿಯೂಟದ ಗುತ್ತಿಗೆ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೌಕರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೆ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿವೆ. ನಮಗೆ ಕನಿಷ್ಠ ವೇತನ ನೀಡಬೇಕು.ಅಕ್ಷಯಪಾತ್ರೆ ಫೌಂಡೇಶನ್ ಗೆ ಯಾವುದೆ ಕಾರಣಕ್ಕೂ ಗುತ್ತಿಗೆ ನೀಡಬಾರದು ಎಂದು ಆಗ್ರಹಿಸಿದರು.
ಒಂದೆಡೆ ಆಹಾರ ತಯಾರಿಸಿ ಜಿಲ್ಲೆಯಾದ್ಯಂತ ಊಟ ವಿತರಿಸಿವಷ್ಟರಲ್ಲಿ ಊಟ ತಣ್ಣಗಾಗಿರುತ್ತದೆ. ಇದರಿಂದ ಬಿಸಿಯೂಟ ಯೋಜನೆ ಎನ್ನುವುದಕ್ಕೆ ಅರ್ಥ ಇಲ್ಲದಂತಾಗುತ್ತದೆ. ಒಂದು ವೇಳೆ ಗುತ್ತಿಗೆ ನೀಡಿದರೆ ನಿರಂತರ ಧರಣಿ ಮಾಡಲಾಗುವುದು. ಕೂಡಲೆ ಸರ್ಕಾರ ಈ ನಿರ್ಧಾರವನ್ನ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದೆ ಸುಮಲತಾ ಏನು ತಿಳಿಯದೆ ನಮ್ಮ ಕೆಲಸ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಸುಮಲತಾಗೆ ಚುನಾವಣೆಯಲ್ಲಿ ಮಾತ್ರ ಹೆಣ್ಣು ಮಕ್ಕಳು ನೆನಪಾಗುತ್ತಾರೆ. ನಮ್ಮಕಷ್ಟಕ್ಕೆ ಯಾಕೆ ಬರಲ್ಲ ಸುಮಲತಾ ಎಂಧು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
Key words: Opposition -leasing –bisiyuta- Protest – Mysore