ಮೈಸೂರು,ಅ,22,2019(www.justkannada.in): ಬ್ಯಾಂಕುಗಳನ್ನ ವಿಲೀನ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾದ ನಡೆಯನ್ನ ಖಂಡಿಸಿ ಬ್ಯಾಂಕ್ ನೌಕರರರ ಸಂಘದ ವತಿಯಿಂದ ಇಂದು ಒಂದು ದಿನದ ಮುಷ್ಕರವನ್ನ ಹಮ್ಮಿಕೊಂಡಿದೆ.
ಬ್ಯಾಂಕುಗಳ ವಿಲೀನಿಕರಣ ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯ್ ಅಸೋಶಿಯೇಷನ್ಸ್ ಮತ್ತು ಬ್ಯಾಂಕ್ ಎಂಪ್ಲಾಯ್ ಫೆಡರೇಷನ್ ಆಫ್ ಇಂಡಿಯಾ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ಇಂದು ಒಂದು ದಿನದ ಬ್ಯಾಂಕ್ ಮುಷ್ಕರವನ್ನ ಹಮ್ಮಿಕೊಂಡಿದೆ.
ಈ ಹಿನ್ನೆಲೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಮುಂದೆ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಬ್ಯಾಂಕ್ ನೌಕರರು ಬ್ಯಾಂಕ್ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಬ್ಯಾಂಕ್ ಗಳ ವಿಸ್ತರಣೆ ಮಾಡುವುದುನ್ನು ಬಿಟ್ಟು ವಿಲೀನ ಮಾಡುವುದು ಸರಿಯಲ್ಲ. ಬ್ಯಾಂಕ್ ಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ವಿಲೀನಿಕರಣಗೊಂಡರೆ ಬ್ಯಾಂಕ್ ಗಳ ಸೇವೆ ಕುಂಠಿತಗೊಳ್ಳುತ್ತದೆ. ಜೊತೆಗೆ ಬ್ಯಾಂಕ್ ಗಳ ಸೇವಾಶುಲ್ಕ ಹೆಚ್ಚು ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಹೀಗಾಗಿ ಸರ್ಕಾರ ಈ ಕೂಡಲೆ ಇದರಿಂದ ಹಿಂದೆ ಸರಿಯಬೇಕು. ಬ್ಯಾಂಕ್ ಗಳ ಖಾಲಿ ಇರುವ ಹುದ್ದೆಗೆ ನೌಕರನ್ನ ನೇಮಕ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Key words: Opposition – merger –banks-Protest – Mysore- District -Bank Employees -Union