ಬೆಂಗಳೂರು,ಫೆಬ್ರವರಿ, 11,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಮುಂದುವರೆದಿದ್ದು ಇಂದು 15 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಕುಮಾರ್ ನಾಯಕ್.ಜಿ. ಅವರನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಕುಮಾರ್ ನಾಯಕ್.ಜಿ. ಅವರು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ) ಡಾ. ರಮಣ ರೆಡ್ಡಿ ಅವರನ್ನ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ. ಮುಂದಿನ ಆದೇಶದವರೆಗೆ ಸರ್ಕಾರ-ಕಮ್ ಅಭಿವೃದ್ಧಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಪ್ರವಾಸೋದ್ಯಮ ಇಲಾಖೆ) ಕಪಿಲ್ ಮೋಹನ್ ಅವರನ್ನ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ.
ಉಮಾಶಂಕರ್ S.R-ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ
ರಶ್ಮಿ ವಿ ಮಹೇಶ್ ಐಎಎಸ್- ಕಾರ್ಯದರ್ಶಿ, ಕಂದಾಯ ಇಲಾಖೆ
ಸೆಲ್ವಕುಮಾರ್ ಎಸ್, ಐಎಎಸ್- ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ಮನೋಜ್ ಜೈನ್ ಐಎಎಸ್- ಕಾರ್ಯರ್ಶಿ, ಅಲ್ಪಸಂಖ್ಯಾಂತ ಅಭೀವೃಧ್ದೀ ನಿಗಮ
ಡಾ.ಶಿವಶಂಕರ್ ಎನ್, ಐಎಎಸ್- ರಾಜೀವ್ ಗಾಂಧಿ ವಸತಿ ನಿಗಮ
ನಳಿನಿ ಅತುಲ್, ಐಎಎಸ್- ನಿರ್ದೆಶಕರು, ಗ್ರಾಮೀಣಭಿವೃದ್ಧಿ ಮತ್ತು ಪಂವಾಯತ್ ರಾಜ್
ಮೊಹಮ್ಮದ್ ರೋಷನ್, ಐಎಎಸ್- ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ
ಭೋಯರ್ ಹರ್ಷಲ್ ನಾರಾಯಣರಾವ್- ಸಿಇಒ, ಬೆಳಗಾವಿ ಜಿಲ್ಲಾ ಪಂಚಾಯತ್
ಭನ್ವರ್ ಸಿಂಗ್ ಮೀನಾ- ವ್ಯವಸ್ಥಾಪಕ ನಿರ್ದೆಶಕರು, ಕೃಷ್ಣ ಮೇಲ್ದಂಡೆ ಯೋಜನೆ, ಬಾಗಲಕೋಟೆ ಜಿಲ್ಲೆ
ಪ್ರಕಾಶ್ ಜಿ.ಟಿ.ನಿಟ್ಟಾಲಿ- ಸಿಇಒ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್
ಮೊಹಮ್ಮದ್ ಅಲಿ ಅಕ್ರಮ್ ಷಾ- ಹೆಚ್ಚುವರಿ ನಿರ್ದೆಶಕರು, ಸಕಾಲ ಯೋಜನೆ
ರವಿ ಎಂ ತಿರ್ಲಾಪುರ- ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ
Key words: Order – transfer -15 IAS officers-G. Kumar Naik -BDA Commissioner