ಮೈಸೂರು,ಜನವರಿ,23,2025 (www.justkannada.in): ಬೈಕ್ ಅಪಘಾತದಲ್ಲಿ ಮೃತಪಟ್ಟ ಮೈಸೂರಿನ ಬಂಡಿಪಾಳ್ಯದ ನಿವಾಸಿ ಸುರೇಶ್ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿದ್ದಾರೆ.
ಡ್ರೈವರ್ ಕೆಲಸ ಮಾಡುತಿದ್ದ ಸುರೇಶ್ ಕಳೆದ ಶನಿವಾರ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಬೈಕ್ ಅಪಘಾತಕ್ಕೀಡಾಗಿತ್ತು. ಮೈಸೂರಿನ ದೇವೇಗೌಡ ಸರ್ಕಲ್ ಬಳಿ ಅಪಘಾತ ಸಂಭವಿಸಿ ಮೆದುಳು ನಿಷ್ಕ್ರಿಯವಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸುರೇಶ್ ಅವರ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ
ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದು ಕಣ್ಣು,ಕಿಡ್ನಿ, ಹೃದಯಾ ದಾನ ಮಾಡುವ ಮೂಲಕ ಸುರೇಶ್ ನಾಲ್ಕಾರು ಜನರ ಜೀವನಕ್ಕೆ ಬೆಳಕಾಗುತ್ತಿದ್ದಾರೆ.
ಸುರೇಶ್ ಅನುರಾಧ ದಂಪತಿಗೆ ಒಂದು ಗಂಡು ಮಗು (11) ವರ್ಷ ಅಭಿಲಾಷ್ ಹೆಣ್ಣು (8) ವರ್ಷ ದೀಕ್ಷಾ ಎಂಬ ಮಕ್ಕಳಿದ್ದಾರೆ. ಇದೀಗ ಸುರೇಶ್ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅಂಗಾಂಗ ದಾನ ಮಾಡಿದ್ದೇವೆ ಸುರೇಶ್ ಮಕ್ಕಳಿಗೆ ಏನಾದರೂ ಸಹಾಯ ಮಾಡಿ. ಬೆಂಕಿಯಲ್ಲಿ ಸುಟ್ಟು ಬೂದಿ ಆಗುವ ಬದಲು ನಾಲ್ಕು ಜನಕ್ಕೆ ಬೆಳಕಾಗಿ ಇರಲಿ ಎಂದು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
Key words: Organ donation, Mysore, ,Accident, death