ನವದೆಹಲಿ,ಮೇ,28,2021(www.justkannada.in): ಕೊರೋನಾದಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಮಹತ್ವದ ಸೂಚನೆಯನ್ನ ನೀಡಿದೆ.
ಕೊರೋನಾದಿಂದ ಅನಾಥರಾದ ಮಕ್ಕಳ ಪಾಲನೆ ಹೊಣೆಯನ್ನ ಜಿಲ್ಲಾಡಳಿತಗಳು ಹೊರಲಿ ಎಂದು ರಾಜ್ಯಗಳ ಎಲ್ಲಾ ಜಿಲ್ಲಾಡಳಿತಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಾಗೆಯೇ ಅನಾಥ ಮಕ್ಕಳ ಅಗತ್ಯತೆಗಳನ್ನ ತಕ್ಷಣವೇ ಪೂರೈಸಿ. ಮಕ್ಕಳು ಹಸಿವಿನಿಂದ ಇರದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಇನ್ನು ದೇಶಾದ್ಯಂತ ಕೊರೋನಾದಿಂದ ಅನಾಥರಾದ ಮಕ್ಕಳ ವಿವರ, ಅಂಕಿ ಅಂಶಗಳನ್ನ ನೀಡಿ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು ಸೋಂಕಿನಿಂದ ಸಾವಿಗೀಡಾಗುತ್ತಿರುವುದು ಹೆಚ್ಚಾಗಿದೆ. ದೇಶದಲ್ಲಿ ಎಷ್ಟೂ ಮಕ್ಕಳು ಕೊರೋನಾದಿಂದಾಗಿ ತಮ್ಮ ತಂದೆ ತಾಯಿ ಕಳೆದುಕೊಂಡು ಅನಾಥರಾಗಿರುವ ಘಟನೆಗಳು ವರದಿಯಾಗಿವೆ.
Key words: orphaned -children – Corona- keeping-Supreme Court –district administration