ವಿಜಯಪುರ,ಫೆ,29,2020(www.justkannada.in): ಬಿಜೆಪಿ 32 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಸಿಎಂ ಇಬ್ರಾಹಿಂ ಯಾವತ್ತು ಸತ್ಯ ಹೇಳಿಲ್ಲ. ಬೇರೆ ಪಕ್ಷದ ಶಾಸಕರೇ ಬಿಜೆಪಿ ಸೇರಲು ಕಾಯುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿಯ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಬೇರೆ ಪಕ್ಷದ ಶಾಸಕರೇ ಬಿಜೆಪಿಗೆ ಸೇರಲು ಕಾಯುತ್ತಿದ್ದಾರೆ. ಅವರ ಮಾಹಿತಿ ಹೇಳಲು ಆಗುವುದಿಲ್ಲ ಎಂದು ಹೊಸಬಾಂಬ್ ಸಿಡಿಸಿದರು.
ಸಿಎಂ ಇಬ್ರಾಹಿಂ 32 ಜನ ಬಿಜೆಪಿ ಶಾಸಕರ ಪೈಕಿ ಅವರು ಒಬ್ಬರ ಹೆಸರು ಹೇಳಲಿ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು. ಇಬ್ರಾಹಿಂ ಕನಸು ಕಾಣುತ್ತಿದ್ದಾರೆ. ಅವರ ಕನಸು ಎಂದಿಗೂ ನನಸಾಗದು ಎಂದು ಗೋವಿಂದ ಕಾರಜೋಳ ಹೇಳಿದರು.
Key words: Other party- MLA-waiting- BJP – join-DCM Govinda Karajola- CM Ibrahim