ಭಾರತ ಮತ್ತು ಚೀನಾ ಸಂಘರ್ಷ ದಲ್ಲಿ ನಮ್ಮ ಸೈನಿಕರಿಗೆ ಯಾವುದೇ ಗಂಭೀರ  ಗಾಯಗಳಾಗಿಲ್ಲ –ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್.

ನವದೆಹಲಿ,ಡಿಸೆಂಬರ್,13,2022(www.justkannada.in):  ಭಾರತ ಮತ್ತು ಚೀನಾ ಸಂಘರ್ಷ ದಲ್ಲಿ ನಮ್ಮ ಸೈನಿಕರು ಚೀನಾ ಸೈನಿಕರನ್ನ ಸಮರ್ಥವಾಗಿ ಹಿಮ್ಮೆಟ್ಟಿಸಿದ್ದಾರೆ.  ನಮ್ಮ ಯೋಧರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನಲ್ಲಿ  ನಡೆದ ಘರ್ಷಣೆಯ ಕುರಿತು ಉತ್ತರ ನೀಡುವಂತೆ ಲೋಕಸಭೆಯಲ್ಲಿ ವಿಪಕ್ಷಗಳು ಆಗ್ರಹಿಸಿದರು. ಈ ವೇಳೆ ವಿವರಣೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಸೆಂಬರ್ 9 ರಂದು ಚೀನಾ ಸೇನೆ ಗಡಿ ನುಸುಳಲು ಯತ್ನಿಸಿತು.  ಈ ವೇಳೆ ನಮ್ಮ ಸೈನಿಕರು ಚೀನಾ ಸೈನಿಕರನ್ನ ಹಿಮ್ಮೆಟ್ಟಿಸಿದ್ದಾರೆ. .ಚೀನಾ ಸೇನೆಗೆ ನಮ್ಮ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ. ನಮ್ಮ ಯೋಧರ ಶೌರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ ಎಂದರು.

ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿದೆ  ಎಂದು ರಾಜನಾಥ್ ಸಿಂಗ್ ತಿಳಿಸಿದರು.

Key words: Our soldiers – not – injuries – India – China –conflict-Union- Defense- Minister- Rajnath Singh.

ENGLISH SUMMARY….

None of our soldiers were injured in the scuffle between India and China soldiers at the border: Defence Minister Rajnath Singh
New Delhi, December 13, 2022 (www.justkannada.in): “Our Soldiers stood like a rock and bravely sent back the China soldiers at the India-China border. None of our soldiers were hurt in the scuffle,” said Union Defence Minister Rajnath Singh.
The opposition parties demanded the Defence Minister in the Lok Sabha to answer the questions on the disturbance between India and China at the border. Replying to the question, Union Defence Minister Rajnath Singh said a few China soldiers attempted to breach at the border on December 9. “Our soldiers stopped them and sent them back. Our soldiers have responded in a brave manner. I congratulate our soldiers for their bravery. None of our soldiers have been hurt in the scuffle,” he replied.
Keywords: Union Defence Minister/ Rajnath Sindh/ India-China/ Scuffle