ಬೆಂಗಳೂರು,ಸೆಪ್ಟಂಬರ್,25,2021(www.justkannada.in): ಕೇಂಧ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಹೀಗಾಗಿ ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸೆಪ್ಟಂಬರ್ 27ರ ಭಾರತ್ ಬಂದ್ ಬಗ್ಗೆ ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ. ರೈತರೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರತಿಯೂಬ್ಬರೂ ಬಂದ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಸೆ.27 ರಂದು ಬೆಳಿಗ್ಗೆ ಕೆ.ಆರ್ ಮಾರ್ಗೆಟ್ ನಿಂದ ರ್ಯಾಲಿ ಆರಂಭವಾಗಲಿದೆ. ಮೆರವಣಿಗೆ ಟೌನ್ ಹಾಲ್ ತಲುಪಲಿದೆ. ಮೈಸೂರು ಬ್ಯಾಂಕ್ ವೃತ್ತದವರೆಗೂ ರ್ಯಾಲಿ ಮಾಡ್ತೇವೆ. ಸರ್ಕಾರದ ಪರವಾಗಿ ಇರುವವರು ಬಂದ್ ಗೆ ಆಕ್ಷೇಪಿಸುತ್ತಾರೆ ಎಂದರು.
ಕೇಂದ್ರ ಸರ್ಕಾರ ಎಲ್ಲವನ್ನು ಖಾಸಗೀಕರಣ ಮಾಡುತ್ತಿದೆ. ರೈಲು, ಬಂದರು,ಹೆದ್ದಾರಿ ಎಲ್ಲವೂ ಖಾಸಗೀಕರಣ ಆಗಿದೆ. ರೈತರು ಖಾಸಗೀಕರಣ ಆಗಬಾರದು. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ. ಸಮಸ್ತ ನಾಗರೀಕರು ಬಂದ್ ಗೆ ಬೆಂಬಲಿಸಬೇಕು. ಬಂದ್ ಗೆ ಯಾವುದೇ ಪಕ್ಷಗಳ ಬೆಂಬಲ ಕೋರಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
Key words: Our- struggle – oppose- privatization-farmer –leader-Kodihalli Chandrasekhar