ಬೆಂಗಳೂರು,ಡಿಸೆಂಬರ್,23,2020(www.justkannada.in): ಎಸ್ ಬಿ ಎಂ ಈಗ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಕಾಂಗ್ರೆಸ್ ನಿಂದ ಒಂದು ಸನ್ನಿವೇಶದಲ್ಲಿ ಹೊರಬಂದಿದ್ದೇವೆ. ಇನ್ನು ಮತ್ತೆ ಪಕ್ಷ ಬದಲಾವಣೇ ಪ್ರಶ್ನೆಯೇ ಇಲ್ಲ. ನಾವು ಪಕ್ಷದಲ್ಲೇ ಇರುತ್ತೇವೆ. ಇದರಲ್ಲಿ ಯಾವುದೇ ಗೊಂದಲಗಳಗಳಿಲ್ಲ. ಯಾವ ಪಕ್ಷ ವಿಲೀನವಾದರೂ, ಕೈಜೋಡಿಸಿದರೂ ನಮ್ಮ ತಕರಾರು ಇಲ್ಲ. ನಮ್ಮದು ಶಿಸ್ತಿನ ಪಕ್ಷವಾಗಿದ್ದು, ವರಿಷ್ಠರು ಹೇಳಿದ್ದನ್ನು ಪಾಲಿಸಬೇಕಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಯಾವ ಸಮಯದಲ್ಲಿ ಏನಾಗಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ. ಅವರು ಈವರೆಗೂ ನುಡಿದಂತೆ ನಡೆದಿದ್ದಾರೆ. ನಮ್ಮ ತಂಡದಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ನಾವು ಉತ್ತಮ ಬಾಂಧವ್ಯಗಳನ್ನು ಹೊಂದಿದ್ದೇವೆ. ಅಲ್ಲದೆ, ನಾವೆಲ್ಲರೂ ಈಗ ಬಿಜೆಪಿಯವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಸಾವಿರಾರು ಜನರಿಂದಲೇ ನಾವು
ತಾವು ಯಾವ ಬಂಡೆ, ಮರಳೂ ಅಲ್ಲ. ತಮ್ಮಿಂದ ಸಾವಿರಾರು ಜನ ಉಪಯೋಗ ಪಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾವಿರಾರು ಜನರ ಪರಿಶ್ರಮದಿಂದಲೇ ಅವರೂ ಸೇರಿದಂತೆ ನನ್ನಂತಹ ಶಾಸಕರು ಆಯ್ಕೆಯಾಗಿರುತ್ತೇವೆ. ಜನರ ಸಹಕಾರ ಇಲ್ಲದಿದ್ದರೆ ಜನನಾಯಕನ ಅಥವಾ ಶಾಸಕನ ಆಯ್ಕೆ ಹೇಗೆ ತಾನೆ ಸಾಧ್ಯ. ಅವರಿಂದ ನಾವು ಎಂಬುದನ್ನು ಮರೆಯದಿರೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಉತ್ತರಿಸಿದರು.
Key words: Ours – disciplinary- party-loyal- supporters – BJP-Minister- S T Somashekhar