ಮೈಸೂರು,ನವೆಂಬರ್,14,2020(www.justkannada.in) : ನನ್ನನ್ನು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೇ ಸಾಧನೆ ಎಂದು ಕೆಲವರು ಅಂದು ಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರು ಬಾದಾಮಿಯಲ್ಲೂ ಸೋತಿದ್ದರೇ ಗೊಂಡಾರಣ್ಯದಲ್ಲಿ ಅವಿತುಕೊಳ್ಳಬೇಕಿತ್ತು. ನಮ್ಮದು ಅವಿತು ಕೊಳ್ಳುವ ಜಾಯಮಾನವಲ್ಲ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ನೀಡಿರುವ ಕೊಡುಗೆಯಾದರೂ ಏನು?
ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸೋತ ದಿನ, ಅಂದು ಸಂಜೆಯೇ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಆದರೆ, ನನ್ನನ್ನು ಸೋಲಿಸಿದವರು ಕಳೆದ ಒಂದೂವರೆ ವರ್ಷದಿಂದ ನೀಡಿರುವ ಕೊಡುಗೆಯಾದರೂ ಏನು? ಎಂದು ಪರೋಕ್ಷವಾಗಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಸೋಲಿಗೆ ಸಾಮೂಹಿಕ ಹೊಣೆ ಹೊರಬೇಕು
ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸೋಲಿಗೆ ಸಾಮೂಹಿಕ ಹೊಣೆ ಹೊರಬೇಕಿದೆ. ಮುನಿರತ್ನ ಈ ಮೊದಲು ನಮ್ಮ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದವರು. ಆದರೆ, ಪಕ್ಷ ತೊರೆದಾಗ ಪಾಲಿಕೆ ಸದಸ್ಯರಿಂದ ಹಿಡಿದು, ಬ್ಲಾಕ್ ಮಟ್ಟದವರೆಗಿನ ಮುಖಂಡರನ್ನು ಅವರ ಜೊತೆ ಕರೆದೊಯ್ದರು, ಹಾಗಾಗಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು.
ಶಿರಾದಲ್ಲಿ ಸಾಕಷ್ಟು ಪೈಪೋಟಿ ನೀಡಿದ್ದೇವೆ. ಆದರೆ, ಉಪ ಚುನಾವಣೆಯಲ್ಲಿ ಮತದಾರರು ಆಳುವ ಪಕ್ಷಗಳ ಪರ ಮತ ಚಲಾಯಿಸುವುದು ವಾಡಿಕೆ. ಹಾಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಡಿಕೆಶಿ ಅವರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
key words : Ours-This-not-buyable-home-Former-MP-Dhruvanarayan