“ಸ್ವಂತ ಉದ್ಯೋಗ ರೂಪಿಸಿಕೊಳ್ಳುವುದನ್ನು ಕಲಿಯಿರಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ

ಮೈಸೂರು,ಮಾರ್ಚ್,05,2021(www.justkannada.in) : ಸರ್ಕಾರಿ ಉದ್ಯೋಗದಿಂದಲೇ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂಬುದಿಲ್ಲ. ಆಸಕ್ತಿಯ ವಿಷಯಗಳಿಗೆ ಒತ್ತು ನೀಡುವ ಮೂಲಕ ಸ್ವಂತ ಉದ್ಯೋಗವನ್ನು ರೂಪಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶುಕ್ರವಾರ  ಮೈಸೂರು ವಿವಿಯ ಕೆರಿಯರ್ ಹಬ್, ಸಿಪಿಡಿಪಿಎಸ್ ಹಾಗೂ ಅಂತಾರಾಷ್ಟ್ರೀಯ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಪದವಿಯಿಂದ ಉದ್ಯಮದೆಡೆಗೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪದವಿ ಪಡೆಯುವ ಕಾತುರ. ಪ್ರಾಧ್ಯಾಪಕರಿಗೆ ಪಠ್ಯವನ್ನು ಸಂಪೂರ್ಣಗೊಳಿಸುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ಈ ನಡುವೆ ಪದವಿ ನಂತರ ವಿದ್ಯಾರ್ಥಿಗಳ ಭವಿಷ್ಯ ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡಲು ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ರೂಸಾ ನೆರವಿನಿಂದ ಕೆರಿಯರ್ ಹಬ್ ಹಮ್ಮಿಕೊಳ್ಳಲಾಗಿದೆ ಎಂದರು.

ವೈಯಕ್ತಿಕ ಮತ್ತು ಸಾಮಾಜಿಕವಾಗಿ ವಿದ್ಯಾರ್ಥಿಗಳನ್ನು ಸದೃಢರನ್ನಾಗಿಸುವ ಕೆಲಸವಾಗಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಇದಕ್ಕೆ ಕೌಶಲ್ಯಗಳ ಕೊರತೆಯು ಕಾರಣವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಈ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಎಲ್ಲ ವಿಭಾಗದ ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಸರ್ಕಾರಿ ಉದ್ಯೋಗ ಸಿಗದಿದ್ದರೆ, ಖಾಸಗಿ ವಲಯದಲ್ಲಿ ನಿಮ್ಮ ಕೌಶಲ್ಯದ ಮೂಲಕ ಉದ್ಯೋಗ ಪಡೆಯಬೇಕು. ಇಲ್ಲವೇ ಉದ್ಯಮವನ್ನು ಆರಂಭಿಸುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

ಪ್ರಕೃತಿವನಂ ಫೌಂಡೇಶನ್ ಸಂಸ್ಥಾಪಕ ಎಂ.ಸಿ.ವಿ.ಪ್ರಸಾದ್ ಮಾತನಾಡಿ, ಉದ್ಯೋಗವಿಲ್ಲದಾಗಲೇ ಯೋಚನೆ ಮಾಡುವುದಕ್ಕೆ ಶುರು ಮಾಡುತ್ತೇವೆ. ಹೀಗೆ ಯೋಚನೆ ಮಾಡುವ ಸಂದರ್ಭ ಪ್ರಕೃತಿಯ ಸಂರಕ್ಷಣೆಯ ಜೊತೆಗೆ ಹೊಸದಾಗಿ ಯೋಚನೆ ಮಾಡಬೇಕು ಎಂದರು.

ಪ್ರಸ್ತುತ ಗಾಳಿ, ನೀರು, ಮಣ್ಣು ಮಲಿನವಾಗಿದೆ. ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಿಕೊಂಡು ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ನಡುವೇ ಹೊಸದಾಗಿ ಉತ್ತಮವಾದುದನ್ನು ಏನನ್ನು ನೀಡಬಹುದು ಎಂಬುದನ್ನು ಯೋಚಿಸಿ ಎಂದು ಹೇಳಿದರು.

Own-occupation-Shaping-Learn-Chancellor-Prof. G.Hemant Kumar 

ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಏನು ಎಂಬ ಜವಾಬ್ದಾರಿ ಬಹಳ ಮುಖ್ಯ. ನಗರಗಳು ಬೆಳೆಯುತ್ತಿವೆ. ಪ್ರಕೃತಿಯೊಂದಿಗೆ ಬದುಕುವುದನ್ನು ಮನುಷ್ಯನಿಗೆ ಕಲಿಸುವ ಕೆಲಸವಾಗಬೇಕಿದೆ. ನಮ್ಮ ಆಲೋಚನೆಯ ರೀತಿಯಲ್ಲಿ ಕೆಲಸ ಸಾಗುತ್ತದೆ. ಹೀಗಾಗಿ, ಉತ್ತಮ ಆಲೋಚನೆಗಳನ್ನು ಮಾಡೋಣ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ಧನ್ ಇತರರು ಉಪಸ್ಥಿತರಿದ್ದರು.

ENGLISH SUMMARY….

‘Learn to become self-employees’: MoU VC
Mysuru, Mar. 05, 2021 (www.justkannada.in): “Don’t depend on government jobs alone. Youth should learn to undertake self-employment based on their interests,” opined Prof. G. Hemanth Kumar, Vice-Chancellor, University of Mysore.
He inaugurated a program titled, “From Degree to Entrepreneurship”, organized by the Career Hub, CPDPS, and International Centre, of the University of Mysore, held at the Senate Bhavan in Manasagangotri today.
In his address to the students, he opined that efforts should be made to make the students strong personally and socially. “Lack of skills is the reason for unemployment in this country. The National Education Policy will help fill this gap,” he said.Own-occupation-Shaping-Learn-Chancellor-Prof. G.Hemant Kumar 
“Students of all the departments should take part in such programs and try to make good utilization of this. If you won’t get a government job, try to earn a job in the private sector by developing the required skills. Otherwise, try to commence a business of your own,” he suggested.
Prof. R. Shivappa, Registrar, University of Mysore, Prof. G.R. Janardhan, Director, International Centre were present.

key words : Own-occupation-Shaping-Learn-Chancellor-Prof. G.Hemant Kumar