ಮೈಸೂರು,ಆಗಸ್ಟ್,29,2020(www.justkannada.in): ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೋನಾಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಲ್ಲಿ ಹಲವು ಸಂಶೋಧನೆ ನಡೆಯುತ್ತಿದೆ. ಈ ನಡುವೆ ಕೊರೋನಾಗಾಗಿ ಕಂಡುಹಿಡಿಯಲಾಗಿರುವ ಆಕ್ಸ್ ಫರ್ಡ್ ಕೋವಿಶೀಲ್ಡ್ ಲಸಿಕೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಪ್ರಯೋಗ ಮಾಡಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿ ಜೆ ಎಸ್ ಎಸ್ ಅಕಾಡೆಮಿಕ್ ನ ಸಮಕುಲಾಧಿಪತಿ ಬಿ. ಸುರೇಶ್ ಮಾಹಿತಿ ನೀಡಿದ್ದಾರೆ. ಕರೋನಾಗೆ ಕಂಡು ಹಿಡಿದ ಲಸಿಕೆಯ ಮೊದಲ ಮಾನವ ಪ್ರಯೋಗ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಜೆಎಸ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯಕ್ಕೆ ಪ್ರಯೋಗದ ಫಲಿತಾಂಶ ಬರಲಿದೆ ಎಂದು ತಿಳಿಸಿದ್ದಾರೆ.
ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಈ ಲಸಿಕೆ ಬಂದಿದ್ದು ನೋಂದಾಯಿತ ಸ್ವಯಂ ಸೇವಕರ ಮೇಲೆ ಮೊದಲ ಪ್ರಯೋಗ ನಡೆಸಲಾಗುತ್ತದೆ. ಒಟ್ಟಾರೇ 250 ಜನರ ಮೇಲೆ ಆಕ್ಸ್ ಫರ್ಡ್ ಕೋವಿಶೀಲ್ಡ್ ಲಸಿಕೆಯನ್ನ ಪ್ರಯೋಗ ಮಾಡಲಾಗುತ್ತದೆ ಎಂದು ಬಿ. ಸುರೇಶ್ ತಿಳಿಸಿದ್ದಾರೆ.
Key words: Oxford Cowshield- Vaccine- Trial -Mysore –Today-corona