ಬೆಂಗಳೂರು,ಮೇ,12,2021(www.justkannada.in): ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಕೋವಿಡ್ ಸೋಂಕಿತರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ವರದಿ ಸಲ್ಲಿಕೆ.
ನ್ಯಾ.ಎ.ಎನ್. ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯಿಂದ ಮಂಗಳವಾರ ವರದಿ ಸಲ್ಲಿಕೆ. ಇಂದು ವರದಿ ಪರಿಶೀಲನೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ,
ಸಮಿತಿ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ. ಪ್ರತಿ ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಸಂಗ್ರಹವಿರಬೇಕು. ಆಕ್ಸಿಜನ್ ಸಾಗಾಟ ವಾಹನಗಳಿಗೆ ಭದ್ರತೆ ಒದಗಿಸಬೇಕು. ಮೈಸೂರಿನ ಆಕ್ಸಿಜನ್ ಬಾಟ್ಲಿಂಗ್ ಪ್ಲಾಂಟ್ ದುರಸ್ತಿ ಪಡಿಸಬೇಕು. ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಿಗೆ ಪರಿಹಾರ. ಈ ಸಂಬಂಧ ಹೈಕೋರ್ಟ್ ನೇಮಿಸಿದ್ದ ಸಮಿತಿ ಶಿಫಾರಸು ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ. ವಿಚಾರಣೆ ನಾಳೆಗೆ ನಿಗದಿಪಡಿಸಿದ ಹೈಕೋರ್ಟ್.
ಚಾಮರಾಜನಗರ ದುರ್ಘಟನೆ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ್ದ ವರದಿಯನ್ನು ಬಹಿರಂಗ ಪಡಿಸಿ ಸರಕಾರ ಹಾಗೂ ಎಲ್ಲ ಅರ್ಜಿದಾರರಿಗೆ ತಲುಪಿಸಲು ಆದೇಶ. ನಾಳೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಆದೇಶ.
ಘಟನೆಗೆ ಹಲವು ಕಾರಣಗಳು ಎಂದು ಹೇಳಲಾಗಿದೆ, ಆದರೆ ನಿಖರವಾಗಿಲ್ಲ, ಗೊಂದಲವಿದೆ. ಸಮಿತಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದು ಸೇರಿ ಹಲವು ಶಿಫಾರಸು ಮಾಡಿವೆ ಅವುಗಳ ಪರಿಗಣಸಲು ರಾಜ್ಯ ಸರಕಾರಕ್ಕೆ ಸೂಚನೆ.
Key words: Oxygen- disaster – Chamarajanagar-Report -submitted –high Court -delivered – government – all applicants