ಹುಬ್ಬಳ್ಳಿ,ನವೆಂಬರ್,3,2021(www.justkannada.in): ರಾಜ್ಯದ ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದು ದೀಪಾವಳಿ ಹಬ್ಬದ ಬಳಿಕ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಭತ್ತ ಖರೀದಿ ಕೇಂದ್ರ ಆರಂಭಿಸಿ ಎಂಬ ಬೇಡಿಕೆ ಇತ್ತು. ಅದರಲ್ಲೂ ಭತ್ತ ಹೆಚ್ಚಾಗಿ ಬೆಳೆಯುವ ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ರಾಜ್ಯದ ರೈತರು ಈ ಬಗ್ಗೆ ಪದೇ ಪದೇ ಮನವಿ ಮಾಡಿದ್ದರು. ಹೀಗಾಗಿ ಎಂಎಸ್.ಪಿ ದರಲ್ಲಿ ಭಕ್ತ ಖರೀದಿಸಲು ಸರ್ಕಾರದ ನಿರ್ಧರಿಸಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲು ತಿಳಿಸಲಾಗಿದೆ.
ದೀಪಾವಳಿ ಹಬ್ಬ ಮುಗಿದ ಬಳಿಕ ಭತ್ತ ಖರೀದಿ ಆರಂಭವಾಗುತ್ತದೆ. ಭತ್ತ ಖರೀದಿ ನೇರವಾಗಿ ಸರ್ಕಾರವೆ ಮಾಡಲಿದೆ. ಜತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿಯೇ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅಲ್ಲಿಯೇ ದೀಪಾವಳಿ ಹಬ್ಬ ಆಚರಣೆ ಮಾಡಲಿದ್ದಾರೆ.
Key words: Paddy- Purchase -begins -after -Dipavali – CM -Basavaraja Bommai