ಬೆಂಗಳೂರು,ಏಪ್ರಿಲ್,04,2021(www.justkannada.in) : ಹಿರಿಯ ನಟಿ ಶಶಿಕಲಾ(88) ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾಗಿದ್ದಾರೆ.ಡಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಶಶಿಕಲಾ ಅವರು ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಶಶಿಕಲಾ ಅವರು 1932ರ ಆಗಸ್ಟ್ ನಲ್ಲಿ ಸೊಲ್ಲಾಪುರದ ಒಂದು ಮಹಾರಾಷ್ಟ್ರ ಕುಟುಂಬದಲ್ಲಿ ಜನಿಸಿದರು.
ಶಶಿಕಲಾ ಅವರು ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ಮುಜ್ಸೆ ಶಾದಿ ಕರೋಹಿ,1953ರಲ್ಲಿ ಬಿಡುಗಡೆಯಾದ ತೀನ್ ಬಟ್ಟಿ ಚಾರ್ ರಾಸ್ತಾ, ಮತ್ತು 1968ರ ಚಿತ್ರ ತೀನ್ ಬಹುರಾನಿಯನ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು.
ಅವರ ಇತರ ಕೆಲವು ಚಿತ್ರಗಳೆಂದರೇ ಅಯೇ ಮಿಲನ್ ಕಿ ಬೇಲಾ, ಗುಮ್ರಾ, ಸುಜಾತಾ, ಮತ್ತು ಆರತಿ. ಶಶಿಕಲಾ ಅವರು ದೂರದರ್ಶನದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಜನಪ್ರಿಯ ಶೋಗಳಾದ ಸನ್ ಪರಿ ಮತ್ತು ಜೀನಾ ಇಸಿ ಕಾ ನಾಮ್ ಹೈ ನಲ್ಲೂ ನಡೆಸಿಕೊಟ್ಟಿದ್ದಾರೆ.ಭಾರತೀಯ ಚಿತ್ರರಂಗದ ಕೊಡುಗೆಗಾಗಿ ಶಶಿಕಲಾ ಅವರಿಗೆ 2007ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2009ರಲ್ಲಿ ವಿ.ಶಾಂತಾರಾಮ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದರು.
key words : Padma Shri-awardee-Bollywood-Senior-actress-Sashikala-Died