ನವದೆಹಲಿ,ಏಪ್ರಿಲ್,23,2025 (www.justkannada.in): ನಿನ್ನೆ ಜಮ್ಮುಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಐಎ ಇದೀಗ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ವಿಧಿವಿಜ್ಞಾನ ತಜ್ಞರಿಂದ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಆಸೀಫ್, ಸುಲೇಮಾನ್, ಅಬು ಫೋಟೊವನ್ನು ಸೇನೆ ರಿಲೀಸ್ ಮಾಡಿದೆ.
ನಿನ್ನೆ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನ ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗರಾದ ಮಂಜುನಾಥ್ ಭರತ್ ಭೂಷಣ್ , ಮಧೂಸೂಧನ್ ಸೇರಿ 25ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಉಗ್ರರ ದಾಳಿಗೆ ಇಡೀ ವಿಶ್ವದಲ್ಲೇ ಖಂಡನೆ ವ್ಯಕ್ತವಾಗಿದೆ.
Key words: Sketches, three suspected, terrorists, Pahalgam attack