ಹುಬ್ಬಳ್ಳಿ,ಫೆ,15,2020(www.justkannada.in): ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳ ವಿರುದ್ದ ದೇಶದ್ರೋಹ ಹಾಗೂ ಕೋಮು ಸೌಹಾರ್ದ ಕದಡುವ ಪ್ರಕರಣ ದಾಖಲಿಸಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್, ಹುಬ್ಬಳ್ಳಿಯ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ್ದಾರೆ. ಸಿವಿಲ್ ಎಂಜುನಿಯರಿಂಗ್ ಎರಡನೆ ಸೆಮಿಸ್ಟರ್ ನ ಇಬ್ಬರು ಹಾಗೂ ಆರನೇ ಸೆಮಿಸ್ಟರ್ ನ ಒಬ್ಬ ವಿದ್ಯಾರ್ಥಿಯನ್ನ ಬಂಧಿಸಲಾಗಿದೆ. ಲಾಜಿಕಲ್ ಎಂಡ್ ಮಾಡಲಿಕ್ಕೆ ಪ್ರಕರಣ ದಾಖಲಿಸಿದ್ದೇವೆ. ದೇಶದ್ರೋಹ ಹಾಗೂ ಕೋಮು ಸೌಹಾರ್ಧ ಕದಡುವ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.
ಘೋಷಣೆ ಕೂಗಿದವರು ಕಾಶ್ಮೀರ ಮೂಲದವರು ಎಂದು ಗೊತ್ತಾಗಿದೆ. ಇನ್ನು ಈ ಬಗ್ಗೆ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ್ ಅನಾಮಿ ದೂರು ನೀಡಿದ್ದಾರೆ. ಅವರ ದೂರು ಹಿನ್ನೆಲೆ ಹಾಗೂ ಎಲ್ಲಾ ತನಿಖೆ ನಡೆಸಲಾಗುವುದು. ವೈರಲ್ ಆಗಿರುವ ವಿಡಿಯೋವನ್ನ ಲ್ಯಾಬ್ ಗೆ ಕಳುಸಿದ ನಂತರ ಎಲ್ಲಾ ಮಾಹಿತಿ ಗೊತ್ತಾಗಲಿದೆ. ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಮೊಬೈಲ್ ಹಾಗೂ ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಆರ್ ದಿಲೀಪ್ ತಿಳಿಸಿದ್ದಾರೆ.
Key words: Pakistan Jindabad –Treason Case- against –Students- Hubli Dharwad- Police Commissioner -R Dilip.