ಬೆಂಗಳೂರು, ಡಿಸೆಂಬರ್ 25, 2022 (www.justkannada.in): ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಆಧಾರ್ ನೊಂದಿಗೆ ಲಿಂಕ್ ಮಾಡದ ಶಾಶ್ವತ ಖಾತೆ ಸಂಖ್ಯೆಗಳನ್ನು (ಪ್ಯಾನ್) ‘ನಿಷ್ಕ್ರಿಯ’ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು 31.3.2023 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಯಾವುದು ಕಡ್ಡಾಯವೋ ಅದು ಅತ್ಯಗತ್ಯ. ತಡಮಾಡಬೇಡಿ, ಇಂದೇ ಲಿಂಕ್ ಮಾಡಿ. 1.04.2023 ರಿಂದ, ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಾಸಿಸುವ ವ್ಯಕ್ತಿಗಳನ್ನು ‘ವಿನಾಯಿತಿ ವರ್ಗ’ ಎಂದು ಕರೆಯಲಾಗುತ್ತದೆ.