ಮೈಸೂರು, ಡಿಸೆಂಬರ್,06,2020(www.justkannada.in) : ಪಂಚಲಿಂಗ ದರ್ಶನಕ್ಕೆ ಎಲ್ಲಾ ಸಿದ್ಧತೆ ಆಗುತ್ತಿದೆ. ಡಿಸೆಂಬರ್ 10ರಿಂದ 19ರ ವರೆಗೆ ನಡೆಯಲಿದೆ. ಡಿಸೆಂಬರ್ 14 ರಂದು ವಿಶೇಷ ಕಾರ್ಯಕ್ರಮ ಇರುತ್ತದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.ಡಿಸೆಂಬರ್ 13ರ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದು ವಾಸ್ತವ್ಯ ಮಾಡಿ, ಡಿಸೆಂಬರ್ 14ರ ಮುಂಜಾನೆ ಪಂಚಲಿಂಗ ದರ್ಶನದ ವಿಶೇಷ ಪೂಜೆಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಪ್ರತಿ ದಿನ 1000 ಜನರಿಗೆ ಹಾಗೂ ಡಿಸೆಂಬರ್ 14 ರಂದು 1500 ಜನರಿಗೆ ಅವಕಾಶ
ಕೋವಿಡ್ ಹಿನ್ನೆಲೆಯಲ್ಲಿ ಸಲಹೆ ನೀಡುವಂತೆ ಪರಿಣಿತರ ಸಮಿತಿಗೆ ಕೇಳಿದ್ದೆವು. ಅವರು ವರದಿಕೊಟ್ಟಿದ್ದಾರೆ. ಪ್ರತಿ ದಿನ 1000 ಜನರಿಗೆ ಹಾಗೂ ಡಿಸೆಂಬರ್ 14 ರಂದು 1500 ಜನರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದು, ಅದರಂತೆ ಆಚರಿಸಲಾಗುತ್ತದೆ ಎಂದರು.
ತಲಕಾಡಿನ ಹಾಗೂ ತಾಲ್ಲೂಕಿನ ಜನರಿಗೆ ಮಾತ್ರ ಅವಕಾಶ
ತಲಕಾಡಿನ ಜನರು ಹಾಗೂ ಆ ತಾಲ್ಲೂಕಿನ ಜನರಿಗೆ ಮಾತ್ರ ಅವಕಾಶ ನೀಡಿ, ಹೊರಗಿನವರಿಗೆ ಅವಕಾಶ ನೀಡದಂತೆ ಪರಿಣಿತರ ಸಮಿತಿ ಸಲಹೆ ಮಾಡಿದೆ ಎಂದು ಹೇಳಿದರು.
ದಸರಾದಲ್ಲಿ ಉಳಿದಿರುವ ಅನುದಾನ ಪಂಚಲಿಂಗದರ್ಶನಕ್ಕೆ
ದಸರಾದಲ್ಲಿ 7.8 ಕೋಟಿ ರೂ. ಅನುದಾನ ಉಳಿದಿದೆ. ಆ ಅನುದಾನದಲ್ಲಿ ಪಂಚಲಿಂಗ ದರ್ಶನಕ್ಕೆ ಬೇಕಾಗುವಷ್ಟು ಅನುದಾನವನ್ನು ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ತಿಳಿಸಿದರು.
key words : Panchalinka-Darshan-December 10-19-Minister- S.T.Somashekhar