ಬೆಂಗಳೂರು, ಡಿಸೆಂಬರ್ 15, 2022 (www.justkannada.in): ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ‘ವಿಳಂಬ ಕಾರ್ಯತಂತ್ರ’ದ ವಿರುದ್ಧ ಆರೋಪಿಸಿ ಕರ್ನಾಟಕದ ಉಚ್ಛ ನ್ಯಾಯಾಲಯ ರೂ.5 ಲಕ್ಷ ದಂಡ ವಿಧಿಸಿದೆ.
ಉಚ್ಛ ನ್ಯಾಯಾಲಯವು ಆದಾಗ್ಯೂ, ಡೀಲಿಮಿಟೇಷನ್ ಚಟುವಟಿಕೆಯನ್ನು ಪೂರ್ಣಗೊಳಿಸಲು ಹಾಗೂ ಈ ಚುನಾವಣೆಗಳಿಗಾಗಿ ಓಬಿಸಿಗಳ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲು ಮೂರು ತಿಂಗಳ ಗಡುವನ್ನು ನೀಡಿದೆ.
ಮಾನ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ. ವರಳೆ ಹಾಗೂ ನ್ಯಾಯಾಧೀಶರಾದ ಅಶೊಕ್ ಸಿ. ಕಿಣಗಿಯವರನ್ನು ಒಳಗೊಂಡ ವಿಭಾಗೀಯ ಪೀಠವು, ಡೀಲಿಮಿಟೇಷನ್ ಪಟ್ಟಿಯನ್ನು ವಿತರಿಸುವುದು ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸುದೆ, ೨೦೨೨ ಅನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಹೂಡಿದ ಕಟ್ಟಳೆಯ ವಿಚಾರಣೆಯನ್ನು ನಡೆಸಿತು.
ಜಿಲ್ಲಾ ಮತ್ತು ತಾಲ್ಲುಕು ಪಂಚಾಯಿತಿ ಕ್ಷೇತ್ರಗಳ ಡೀಲಿಮಿಟೇಷನ್ ಗಾಗಿ ರಾಜ್ಯ ಸರ್ಕಾರ ರಚಿಸಿದಂತಹ ಡೀಲಿಮಿಟೇಷನ್ ಆಯೋಗದ ಪರವಾಗಿ ಪ್ರತಿನಿಧಿಸಿದ ಹಿರಿಯ ವಕೀಲರು, ಡೀಲಮಿಟೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ೯೦ ದಿನಗಳ ಗಡುವನ್ನು ನೀಡುವಂತೆ ಕೋರಿದರು.
ಉಚ್ಛ ನ್ಯಾಯಾಲಯವು ಈ ಚಟುವಟಿಕೆ/ಪ್ರಕ್ರಿಯೆಯನ್ನು ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸುತ್ತಾ ಪದೇ ಪದೇ ಗಡುವನ್ನು ಕೋರುವುದು ಸರಿಯಲ್ಲ ಎಂದು ತಿಳಿಸಿತು. ಆರು ತಿಂಗಳ ಗಡುವನ್ನು ನೀಡಿದ ನಂತರವೂ ಸಹ ಸರ್ಕಾರ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ ಎಂದರೆ ಅದು ಉಚ್ಛ ನ್ಯಾಯಾಲಯದ ಆದೇಶವನ್ನು ಬುಡಮೇಲುಗೊಳಿಸುವ ಪ್ರಯತ್ನದಂತಿದೆ ಎಂದು ಚಾಟಿ ಬೀಸಿತು.
ಈ ಆದೇಶದಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು, “ರಾಜ್ಯ ಸರ್ಕಾರದ ದೃಷ್ಟಿಕೋನವನ್ನು ನಾವು ಅನುಮೋದಿಸುತ್ತಿಲ್ಲವಾದರೂ, ಮತ್ತೊಂದು ಅವಕಾಶವನ್ನು ನೀಡುವುದು ನ್ಯಾಯಯುತ ಎನ್ನುವ ಕಾರಣದಿಂದಾಗಿ ಫೆಬ್ರವರಿ ೨, ೨೦೨೩ರವರೆಗೂ ಗಡುವನ್ನು ನೀಡಲಾಗುತ್ತಿದೆ,” ಎಂದು ತಿಳಿಸಿತು.
ರಾಜ್ಯ ಸರ್ಕಾರ ಹಾಗೂ ರಾಜ್ಯ ಡೀಲಿಮಿಟೇಷನ್ ಆಯೋಗವು ಫೆಬ್ರವರಿ ೧, ೨೦೨೩ರೊಳಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು, ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸಂಬಂಧಪಟ್ಟ ಡೀಲಿಮಿಟೇಷನ್ ಹಾಗೂ ಮೀಸಲಾತಿ ಪ್ರಕ್ರಿಯೆಗಳನ್ನು ಜನವರಿ ೩೧, ೨೦೨೨ರೊಳೆಗೆ ಸಲ್ಲಿಸಿ, ಮುಂಚಿನ ವಿಚಾರಣಾ ದಿನಾಂಕ, ಅಂದರೆ ಫೆಬ್ರವರಿ ೨, ೨೦೨೩ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು.
ಮೇ ೨೪, ೨೦೨೨ರಂದು ಉಚ್ಛ ನ್ಯಾಯಾಲಯದ ಪೀಠವು, ೧೨ ವಾರಗಳ ಒಳಗಾಗಿ ಓಬಿಸಿ ಮೀಸಲಾತಿ ಪಟ್ಟಿ ಹಾಗೂ ಡೀಲಿಮಿಟೇಷನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿತ್ತು.
ಹೈಕೋರ್ಟ್ ಸರ್ಕಾರಕ್ಕೆ ಜನವರಿ ೨೮ರೊಳಗಾಗಿ ರೂ.೫ ಲಕ್ಷ ದಂಡವನ್ನು ಪಾವತಿಸುವಂತೆ ಸೂಚಿಸಿದೆ. ಈ ಪೈಕಿ ರೂ.೨ ಲಕ್ಷವನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇಡಬೇಕು, ಹಾಗೂ ರೂ.೨ ಲಕ್ಷವನ್ನು ವಕೀಲರ ಸಂಘ, ಬೆಂಗಳೂರು ಹಾಗೂ ಉಳಿದ ರೂ. ೧ ಲಕ್ಷವನ್ನು ವಕೀಲರ ಗುಮಾಸ್ತರ ಕಲ್ಯಾಣ ಸಂಘದಲ್ಲಿ ಠೇವಣಿ ಇರಿಸಬೇಕೆಂದು ತಿಳಿಸಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Panchayat-election-delayed- high court- fined -state government