ಬೆಂಗಳೂರು,ಜನವರಿ,14,2023(www.justkannada.in): ಪಂಚಮಸಾಲಿ ಮೀಸಲಾತಿ ಹೋರಾಟ ಬೀದಿಗೆ ಬಿದ್ದಿದ್ದು ಮೀಸಲಾತಿಗಾಗಿ ಹಠ ಹಿಡಿದು ಪ್ರತಿಭಟನೆಗಿಳಿದಿರುವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿಸಿ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಏಕೆ ಮೀಸಲಾತಿ ಕೇಳಲಿಲ್ಲ. ಅಂದು 2016ರಲ್ಲಿ ಕಾಂತರಾಜ್ ವರದಿಯಲ್ಲಿ ಮೀಸಲಾತಿ ಕೊಡಬಾರದು ಎಂದು ಹೇಳಿತ್ತು. ಆಗ ಯತ್ನಾಳ್ , ಜಯಮೃತ್ಯುಂಜಯ ಸ್ವಾಮೀಜಿಗಳು ಎಲ್ಲಿ ಮಲಗಿದ್ದರು. ರಾಜಕೀಯ ಕಾರಣಕ್ಕಾಗಿ ಪಂಚಮಸಾಲಿ ಹೋರಾಟ ನಡೆಸುತ್ತಿದ್ದಾರೆ . ಲಿಂಗಾಯಿತ ಸಮುದಾಯ ಒಡೆಯುವ ಹುನ್ನಾರ ನಡೆಸಿದ್ದಾರೆ. ಅಂದು ಸ್ವಾಮೀಜಿ ಕಾಂತರಾಜ್ ವರದಿ ವಿರೋಧಿಸಲಿಲ್ಲ ಇಂದು ಲಿಂಗಾಯತ ಸಮುದಾಯ ಒಡೆಯಲು ಹೋರಾಟ ಮಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ನೀಡಬೇಕು ಶ್ರೀಗಳು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎಂದು ಇಬ್ಬರು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಿಎಂ ಬೇಟಿಯಾದ ಸಚಿವ ಮುರುಗೇಶ್ ನಿರಾಣಿ ಮತ್ತು ಸಿಸಿ ಪಾಟೀಲ್ ಕೆಲಕಾಲ ಚರ್ಚಿಸಿದರು. ಈ ವೇಳೆ ಸಚಿವರ ಬಳಿ ಸಿಎಂ ಬೊಮ್ಮಾಯಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ತಮ್ಮನ್ನು ಪಿಂಪ್ ಎಂದು ಕರೆದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಚಿವ ಮುರುಗೇಶ್ ನಿರಾಣಿ, ಯತ್ನಳ್ ಪಿಂಪ್ ಕೆಲಸ ಮಾಡಿದ್ದಾನೆ . ತಾಕತ್ತಿದ್ದರೇ ಬಿಜೆಪಿ ಬಿಟ್ಟು ಮಾತನಾಡಲಿ. ನಾಲಿಗೆ ಹರಿಬಿಟ್ರೆ ನಾಲಿಗೆ ಕತ್ತರಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
Key words: Panchmasali -fight – political reasons- Minister-murugesh nirani