ಮೈಕ್ರೋ ಫೈನಾನ್ಸ್ ಕಿರುಕುಳ: 3 ವರ್ಷದ ಬದಲು  10 ವರ್ಷ ಜೈಲುಶಿಕ್ಷೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಫೆಬ್ರವರಿ,4,2025 (www.justkannada.in)  ಮೈಕ್ರೋ ಫೈನಾಸ್ಸ್‌ನವರ ಹಾವಳಿ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿದ್ದು,  ಇದಕ್ಕೆ ಸಂಬಂಧಿಸಿದ ಕರಡು ಪ್ರತಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ.

ಈ ಕುರಿತು ಮಾತನಾಡಿರುವ ಗೃಹಸಚಿವ ಡಾ.ಜಿ. ಪರಮೇಶ್ವರ್,  ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ದೌರ್ಜನ್ಯಕ್ಕೆ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇದರ ಮಧ್ಯ ನೆನ್ನೆ ರಾಜ್ಯಪಾಲರಿಗೆ ಮೈಕ್ರೋ ಫೈನಾನ್ಸ್ ದೌರ್ಜನ್ಯ ತಡೆ ಕುರಿತು ಕರಡು ಪ್ರತಿಯನ್ನು ಕಳುಹಿಸಲಾಗಿದ್ದು, ಇಂದು ರಾಜ್ಯಪಾಲರು ಕರಡು ಪ್ರತಿಯನ್ನು ಪರಿಶೀಲಿಸಿ ಅಂಕಿತ ಹಾಕುವ ಸಾಧ್ಯತೆ ಇದೆ. ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆಯಲ್ಲಿ ಈ ಹಿಂದೆ ಶಿಕ್ಷೆಯನ್ನು ಮೂರು ವರ್ಷ ಬದಲು 10 ವರ್ಷಕ್ಕೆ ಏರಿಕೆ  ಮಾಡಿದ್ದೇವೆ. ದಂಡದ ಮತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದೇವೆ. ಬಿಲ್ ಅನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇವೆ. ಇವತ್ತು ಪರಿಶೀಲಿಸಿ ರಾಜಪಾಲರು ಅಂಕಿತ ಹಾಕಬಹುದು ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಬಳಕೆಗೆ ಅವಕಾಶ ನೀಡುವ  ಕುರಿತು ಪ್ರತಿಕ್ರಿಯಿಸಿದ  ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ  ವಿಚಾರಕ್ಕೆ ಸಂಬಂಧಿಸಿದಂತೆ ಸುಧೀರ್ಘವಾಗಿ ಚರ್ಚೆ ಮಾಡುತ್ತೇವೆ. ಇನ್ನು ಒಂದು ತಿಂಗಳು ಸಮಯವಿದೆ ನೋಡೋಣ ಚರ್ಚೆ ಮಾಡುತ್ತೇವೆ ಎಂದರು.

Key words: Microfinance, harassment, 10 years , prison, Minister, Parameshwar