ತುಮಕೂರು,ಫೆಬ್ರವರಿ,4,2021(www.justkannada.in): ಪುತ್ರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡ ಪೋಷಕರು ಆಕೆಯ ಗಂಡನಿಗೆ ಸೇರಿದ್ಧ ಅಡಿಕೆ ಗಿಡಗಳನ್ನ ನಾಶಪಡಿಸಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರ ಗ್ರಾಮದ ರವಿಚಂದ್ರ ಮತ್ತು ಅನು ಇಬ್ಬರು ಪರಸ್ಪರ ಪ್ರೀತಿಸಿದ್ದರು. ಈ ನಡುವೆ ಎರಡು ದಿನಗಳ ಹಿಂದೆ ರವಿಚಂದ್ರ ಮತ್ತು ಅನು ದೇವಾಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಇದನ್ನು ಸಹಿಸದ ಹುಡುಗಿಯ ಪೋಷಕರು ರವಿಚಂದ್ರಗೆ ಸೇರಿದ್ಧ ಸುಮಾರು 7 ರಿಂದ 8 ವರ್ಷಗಳ ಕಾಲ ಬೆಳೆಸಿದ್ದ ಅಡಿಕೆಗಿಡಗಳನ್ನ ನಾಶಪಡಿಸಿ ತಮ್ಮ ಕೋಪವನ್ನ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.
Key words: Parents- anger – daughter-love marriage-Destroy – nut trees….