ಬೆಂಗಳೂರು, ಜೂನ್ 26, 2021 (www.justkannada.in): ರೈಲ್ವೆ ಆನ್ ಲೈನ್ ಬುಕಿಂಗ್ ಸಮಯದಲ್ಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಕಡ್ಡಾಯಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಹೌದು. ಆನ್ ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್, ಪಾಸ್ ಪೋರ್ಟ್ ಕಡ್ಡಾಯವಾಗಲಿದ್ದು, ಶೀಘ್ರದಲ್ಲೇ ನಿಯಮ ಜಾರಿಯಾಗಲಿದೆ.
ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್ ನೊಂದಿಗೆ ಲಾಗಿನ್ ಆಗುವ ಬದಲು, ಒಬ್ಬ ವ್ಯಕ್ತಿಯು ವೆಬ್ ಸೈಟ್ ಗೆ ಲಾಗ್ ಇನ್ ಆಗುವ ಮೊದಲು ಮಾನ್ಯ ಗುರುತಿನ ದಾಖಲೆಯಾಗಿರುವ ಈ ಸರ್ಕಾರಿ ದಾಖಲೆಗಳಲ್ಲಿ ಯಾವುದಾದರೂ ಒಂದು ಕಡ್ಡಾಯವಾಗಿರುತ್ತದೆ.
ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ರೈಲು ಟಿಕೆಟ್ ಗಳನ್ನು ಕಾಯ್ದಿರಿಸಲು ತನ್ನ ವೆಬ್ ಸೈಟ್ ದುರುಪಯೋಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.