ಪಾವಗಡ, ಮಾರ್ಚ್ 15, 2024(www.justkannada.in): ಪಾವಗಡ ಸೋಲಾರ್ ಪಾರ್ಕ್ನ ಎರಡನೇ ಹಂತವನ್ನು ಮುಂದಿನ 2 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಇಲ್ಲಿನ ತಿರುಗುಣಿಯಲ್ಲಿರುವ ಕೆಎಸ್ಪಿಡಿಸಿಎಲ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ಜಾರ್ಜ್ ಮಾತನಾಡಿದರು.
“ರಾಜ್ಯದ ವಿದ್ಯುತ್ ಸಮಸ್ಯೆ ನೀಗಿಸಿ, ವಿದ್ಯುತ್ ಸ್ವಾವಲಂಬನೆ ಸಾಧಿಸಲು 2000 ಮೆ.ವ್ಯಾ. ಸಾಮರ್ಥ್ಯದ 2ನೇ ಹಂತದ ಯೋಜನೆಗೆ ಸ್ಥಳೀಯರ ಸಹಕಾರ ಅಗತ್ಯ. ಸ್ವಯಂ ಪ್ರೇರಣೆಯಿಂದ ಭೂಮಿಯನ್ನು ಭೋಗ್ಯಕ್ಕೆ ಕೊಡಲು ಮುಂದೆ ಬಂದಿರುವ ರೈತರಿಗೆ ಧನ್ಯವಾದ,” ಎಂದರು.
“ಹಿಂದುಳಿದ ಪ್ರದೇಶ ಎನಿಸಿಕೊಂಡಿದ್ದ ಪಾವಗಡಕ್ಕೆ ಸೂರ್ಯನ ಶಕ್ತಿ ಇದೆ. ಅದಕ್ಕಿಂತ ಬೇರೆ ಶಕ್ತಿ ಇಲ್ಲ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕನಸಿನ ಫಲ ಪಾವಗಡ ಸೋಲಾರ್ ಪಾರ್ಕ್ ಆಗ ವಿಶ್ವದಲ್ಲೇ ನಂಬರ್ ಒನ್ ಆಗಿತ್ತು. ಈಗ ನಾವು 4ನೇ ಸ್ಥಾನದಲ್ಲಿದ್ದು, ಮತ್ತೆ ನಂಬರ್ ಒನ್ ಸ್ಥಾನಕ್ಕೇರುವ ಸಂಕಲ್ಪ ಮಾಡಿದ್ದೇವೆ,” ಎಂದರು.
Key words: Pavagada Solar Park -2nd Phase -2 years – Minister- KJ George