ಮೈಸೂರು,ಜೂನ್,12,2023(www.justkannada.in): ಮೈಸೂರಿನಲ್ಲಿ ಪೇ ಅಂಡ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಾಲಿಕೆ ಮೇಯರ್ ಶಿವಕುಮಾರ್, ನಗರದ ದೇವರಾಜ ಅರಸು ರಸ್ತೆ ಅಶೋಕ ರಸ್ತೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ . ವ್ಯಾಪರಿಗಳ ಒಕ್ಕೂಟ ಮನವಿ ಮೇರೆಗೆ ಇದನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಮೇಯರ್ ಶಿವಕುಮಾರ್, ಬೆಳಿಗ್ಗೆಯಿಂದ ಸಂಜೆಯವರೆಗೆ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ. ಇದರಿಂದ ವ್ಯಾಪಾರ ಮಾಡುವುದು ಕಷ್ಟವಾಗಿದೆ ಎಂದು ಮನವಿ ಮಾಡಿದ್ದರು. ಹೀಗಾಗಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಕೊಡಲಾಗಿದೆ. ಎರಡು ಗಂಟೆಗಳಿಗೆ 20 ರೂ. ನಂತೆ ಕಾರುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಮೊದಲ ಗಂಟೆ ಉಚಿತ ಪಾರ್ಕಿಂಗ್ ಇರುತ್ತದೆ. ನಂತರ ಗಂಟೆಗೆ ಇಷ್ಟು ಅಂತ ಶುಲ್ಕ ವಿಧಿಸಲಾಗುತ್ತದೆ ಎಂದರು.
ಪಾರ್ಕಿಂಗ್ ವ್ಯವಸ್ಥೆ ವಿರೋಧಿಸುವ ಸಂಘಟನೆಗಳ ಜೊತೆ ಮಾತನಾಡುತ್ತೇವೆ. ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಟೆಂಡರ್ ಕರೆದು ಖಾಸಗಿಯವರ ಮೂಲಕ ಪಾರ್ಕಿಂಗ್ ಟಿಕೆಟ್ ನೀಡಲಾಗುತ್ತೆ. ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಸಾರ್ವಜನಿಕರಿಗೆ ಅನುಕೂಲ ಅಗಲಿ ಅನ್ನುವುದೇ ನಮ್ಮ ಉದ್ದೇಶ. ಇದರಿಂದ ಹಣ ಮಾಡುವ ಉದ್ದೇಶ ಇಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಸಹ ಶುರುವಾಗಲಿದೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
Key words: Pay and parking -implemented – Mysore – Mayor -Shivakumar.