ಬೆಂಗಳೂರು,ಸೆಪ್ಟಂಬರ್,22,2022(www.justkannada.in): ಪೇ ಸಿಎಂ ಅಭಿಯಾನ ವಿಚಾರ ವಿಧಾನಪರಿಷತ್ ನಲ್ಲೂ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ’ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.
ಪೇ ಸಿಎಂ’ ಅಭಿಯಾನ ಮುಂದವರೆಸಿರುವ ಕಾಂಗ್ರೆಸ್ ಇಂದು ವಿಧಾನ ಪರಿಷತ್ ಕಲಾಪದಲ್ಲೂ ಭಿತ್ತಿಪತ್ರ ಪ್ರದರ್ಶನ ಮಾಡಿ ಆಕ್ರೋಶ ಹೊರ ಹಾಕಿದೆ. ಪೋಸ್ಟರ್ ಹಿಡಿದು ಸಭಾಪತಿ ಪೀಠಕ್ಕೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸಭಾಪತಿ ವಿರುದ್ಧ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಘೋಷಣೆ ಕೂಗಿದರು. ಮಧ್ಯರಾತ್ರಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಕಾರ್ಯಕರ್ತರು ಟೆರೆರಿಸ್ಟ್ ಗಳಾ..? 40%, 100% ಎಲ್ಲಾ ವಿಚಾರಗಳು ಚರ್ಚೆಯಾಗಲಿ ಎಂದು ಹರಿಪ್ರಸಾದ್ ಆಗ್ರಹಿಸಿದರು.
ಸಿಎಂ ಮನವಿಗೂ ಸ್ಪಂದಿಸದೆ ಕಾಂಗ್ರೆಸ್ ಧರಣಿ ಮುಂದುವರೆಸಿತು. ಇತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರೂ ಸಹ ಕಾಂಗ್ರೆಸ್ ಕುರಿತು ವಿಚಾರಗಳ ಬಗ್ಗೆ ಭಿತ್ತಿ ಪತ್ರ ಪ್ರದರ್ಶಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದು ಗದ್ದಲ ಉಂಟಾಯಿತು. ಹೀಗಾಗಿ ಕಲಾಪವನ್ನ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
Key words: Pay CM- congress-protest-legislative council