ಬೆಂಗಳೂರು,ನವೆಂಬರ್,4,2021(www.justkannada.in): ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ತಂತ್ರಜ್ಞಾನ ಬಳಸಿ ನಕಲು ಪ್ರಕರಣವನ್ನು ಗೃಹ ಇಲಾಖೆ ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ.
ಅಕ್ಟೋಬರ್ 24, ರಂದು ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಸಿ, ಪರೀಕ್ಷಾರ್ಥಿಗಳು ನಕಲಿಗೆ ಯತ್ನಿಸಿದ್ದರು. ಈ ಕುರಿತು ಖಚಿತ ಮಾಹಿತಿ ತಿಳಿದ ಪೊಲೀಸರು ಬೆಳಗಾವಿಯ ರಾಮತೀರ್ಥ ನಗರದಲ್ಲಿನ ಪರೀಕ್ಷಾ ಕೇಂದ್ರಕ್ಕೆ ದಾಳಿ ನಡೆಸಿ, 12 ಜನರನ್ನು ಬಂಧಿಸಿದ್ದರು. ಇವರಲ್ಲಿ ಇಬ್ಬರು ಪರೀಕ್ಷಾರ್ಥಿಗಳಾಗಿದ್ದರು.
ಪ್ರಕರಣ ಸಂಬಂಧ 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲೂಟೂತ್, ಮೂರು ಟ್ಯಾಬ್, ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದೀಗ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿರುವ ಗೃಹ ಇಲಾಖೆ ಪಿಸಿ ಪರೀಕ್ಷೆ ನಕಲು ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Key words: PC Exam-copy-case- Transfer – CID.
ENGLISH SUMMARY…
Case of copying during Police Constable exams handed over to CID
Bengaluru, November 4, 2021 (www.justkannada.in): The State Home Department has handed over the case of copying during the Police Constable recruitment exams using technology to the Criminal Investigation Department.
The competitive exams for the recruitment of police constables were held on October 24. A few students had attempted to copy in the exams using blue tooth. Upon reliable information, the police raided the examination center located at the Ramatheerthanagara in Belagavi and held 12 persons in this regard, including two candidates appearing for the exams.
The police had also seized 33 mobile phones, 9 master card devices, 13 blue tooth devices, three tabs, and one laptop. The handwork of police was suspected in the case. The State Government has issued orders to hand over the case to the CID.
Keywords: Police Constable exams/ CID/ copying