ಕೊಳ್ಳೇಗಾಲ,ಮಾ.15, 2022 : (www.justkannada.in news ) ಹನೂರು ತಾಲ್ಲೂಕು ಹೂಗ್ಯಂ ಗ್ರಾ.ಪಂ ಪಿಡಿಒ ಆನಂದ್ ಕಾಂಬಳೆ ಅವರ ಪತ್ನಿ ವಿದ್ಯಾಶ್ರೀ (22) ನಗರಸಭೆ ವ್ಯಾಪ್ತಿಗೆ ಸೇರಿದ ಬಸ್ತಿಪುರ ಬಡಾವಣೆಯಲ್ಲಿ ನೇಣಿಗೆ ಶರಣು.
ಮೂರು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆ ಪಿಡಿಒ ಆನಂದ್ ಜತೆಗೆ ಬಾಗಲಕೋಟೆಯ ವಿದ್ಯಾಶ್ರೀ ವಿವಾಹ ನಡೆದಿತ್ತು. ಈ ವೇಳೆಯಲ್ಲಿ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು ಎಂದು ಮೃತರ ಪೋಷಕರು ಪಟ್ಟಣ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಳಿಯ ಆನಂದ್, ಹಣಕ್ಕಾಗಿ ನಮ್ಮ ಮಗಳನ್ನು ಪಿಡಿಸುತ್ತಿದ್ದ. ಜತೆಗೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ. ಇದರಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾಶ್ರೀ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವಿದ್ಯಾಶ್ರೀ, 9 ತಿಂಗಳ ಗಂಡು ಮಗುವನ್ನು ಅಗಲಿದ್ದಾಳೆ. ಪಟ್ಟಣ ಪೊಲೀಸರು ಆರೋಪಿ ಪತಿ ಆನಂದ್ , ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಹಶೀಲ್ದಾರ್ ಸಮ್ಮುಖದಲ್ಲಿ ಸಾವಿಗೀಡಾದ ಸ್ಥಳ ಹಾಗೂ ಮೃತ್ತದೇಹವನ್ನು ಪರೀಶೀಲಿಸಿ ಬಳಿಕ ಚಾ.ನಗರ ಜಿಲ್ಲೆಯಲ್ಲಿ ಶವಪರೀಕ್ಷೆ ನಡೆಸಲು ಶವ ರವಾನಿಸಲಾಗಿದೆ.

key words : pdo-wife-suicide