ನವದೆಹಲಿ, ಡಿಸೆಂಬರ್ 23, 2021 (www.justkannada.in): ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ರೂ.೬೦,೦೦೦ ಕೋಟಿ ಮೊತ್ತದ ಪರ್ಲ್ಸ್ ಗ್ರೂಪ್ ಚಿಟ್ ಫಂಡ್ ಮೋಸದ ಪ್ರಕರಣದಲ್ಲಿ 11 ಜನರನ್ನು ಬಂಧಿಸಿದೆ. ಪರ್ಲ್ಸ್ ಗ್ರೂಪ್ ಐದು ಕೋಟಿಗೂ ಹೆಚ್ಚಿನ ಸಂಖ್ಯೆಯ ಹೂಡಿಕೆದಾರರಿಂದ ಹೂಡಿಕೆ ರೂಪದಲ್ಲಿ ಹಣವನ್ನು ಸಂಗ್ರಹಿಸಿತ್ತು.
ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸಿಬಿಐ, ದೇಶದಾದ್ಯಂತ ಐದು ಕೋಟಿ ಹೂಡಿಕೆದಾರರಿಂದ ವಿವಿಧ ಹೂಡಿಕಾ ಯೋಜನೆಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ರೂ.೬೦,೦೦೦ ಕೋಟಿಗಳಷ್ಟು ಹಣವನ್ನು ಹೂಡಿಕೆ ರೂಪದಲ್ಲಿ ಸಂಗ್ರಹಿಸಿದ್ದಂತಹ ಪರ್ಲ್ಸ್ ಗ್ರೂಪ್ (ಪಿಜಿಎಫ್ ಲಿಮಿಟೆಡ್, ಪಿಎಸಿಲ್ ಲಿಮಿಟೆಡ್)ನ ವಿರುದ್ಧ ಪ್ರಾಥಮಿಕ ತಪಾಸಣೆಯನ್ನು ನಡೆಸಿತು. ಪಿಜಿಎಫ್ ಯಾವುದೇ ಶಾಸನಬದ್ಧ ಅನುಮೋದನೆ ಇಲ್ಲದೆಯೇ ಹೂಡಿಕೆಗಳನ್ನು ಪಡೆದು ಜನರನ್ನು ವಂಚಿಸಿದೆ.
ತಪಾಸಣೆಯನ್ನು ಆಧರಿಸಿ ಪಿಜಿಎಫ್ ಲಿಮಿಟೆಡ್, ಪಿಎಸಿಎಲ್ ಲಿಮಿಟೆಡ್ ನ ನಿರ್ಮಲ್ ಸಿಂಗ್ ಭಂಗೂ, ಪರ್ಲ್ಸ್ ಗ್ರೂಪ್ ನ ಈ ಎರಡೂ ಮುಂಚೂಣಿ ಕಂಪನಿಗಳು ಹಾಗೂ ಇನ್ನಿತರರ ಪ್ರಕರಣವನ್ನು ದಾಖಲಿಸಲಾಯಿತು.
ಜೊತೆಗೆ ಸಿಬಿಐ ಈ ಹಗರಣದಲ್ಲಿ ಭಾಗೀದಾರರಾಗಿರುವಂತಹ ಪರ್ಲ್ಸ್ ಗ್ರೂಪ್ ನ ಈ ಎಕ್ಸ್ಕ್ಯೂಟಿವ್ಗಳನ್ನೂ ಸಹ ಬಂಧಿಸಿದೆ – ಚಂದರ್ ಭೂಷಣ್ ದಿಲ್ಲೋನ್, ಪ್ರೇಮ್ ಸೇಠ್, ಮನ್ ಮೋಹನ್ ಕಮಲ್ ಮಹಾಜನ್, ಮೋಹನ್ ಲಾಲ್ ಸೇಹಜ್ ಪಾಲ್ ಹಾಗು ಕನ್ವಲ್ಜಿತ್ ಸಿಂಗ್ ತೂರ್. ಉದ್ಯಮಿಗಳಾದ ಪ್ರವೀಣ್ ಕುಮಾರ್ ಅಗರ್ವಾಲ್, ಮನೋಜ್ ಕುಮಾರ್ , ಆಕಾಶ್ ಅಗರ್ವಾಲ್, ಅನಿಲ್ ಕುಮಾರ್ ಖೇಮ್ಕಾ, ಸುಭಾಷ್ ಅಗರ್ ವಾಲ್, ಮತ್ತು ರಾಜೇಶ್ ಅಗರ್ವಾಲ್ ಅವರನ್ನೂ ಸಹ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿ, ಚಂಡೀಘಡ, ಕೋಲ್ಕತ್ತಾ ಮತ್ತು ಭುವನೇಶ್ವರಗಳಲ್ಲಿ ಈ ಮೇಲ್ಕಂಡವರನ್ನು ಬಂಧಿಸಲಾಗಿದೆ. ನಿರ್ಮಲ್ ಸಿಂಗ್ ಭಂಗೂ, ಸುಖದೇವ್ ಸಿಂಗ್, ಸುಬ್ರತಾ ಭಟ್ಟಾಚಾರ್ಯ ಮತ್ತು ಗುರ್ಮೀತ್ ಸಿಂಗ್ ಅವರುಗಳನ್ನು ಜನವರಿ ೮, ೨೦೧೬ರಂದು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಏಪ್ರಿಲ್ ೭, ೨೦೧೬ರಂದು ಆರೋಪಪಟ್ಟಿಯನ್ನು ದಾಖಲಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಸಿಬಿಐನ ವಕ್ತಾರರಾದ ಆರ್.ಸಿ. ಜೋಷಿ ಅವರು, “ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿರುವಂತಹ ಈ ಬಹುಕೋಟಿ ಹಣಕಾಸು ಹಗರಣದಲ್ಲಿ ಪಾತ್ರವಿರುವ ಇತರೆ ಆರೋಪಿಗಳು ಹಾಗೂ ಅನುಮಾನಸ್ಥರ ಕುರಿತು ಇನ್ನೂ ಹೆಚ್ಚಿನ ತಪಾಸಣೆಯನ್ನು ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಸುದ್ದಿ ಮೂಲ: ಇಂಡಿಯಾ ಟುಡೆ
Key words: Pearls Group- chit fund –scam- CBI –arrested- 11 people