ಬೆಂಗಳೂರು,ಜುಲೈ,13,2023(www.justkannada.in): ಕಾಂಗ್ರೆಸ್ ನವರಿಗೇಕೆ ಇಷ್ಟು ಆತುರ..? ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪೆನ್ಡ್ರೈವ್ ಖಾಲಿ ಇಲ್ಲ, ಈ ಪೆನ್ಡ್ರೈವ್ ಬೇರೆಯದ್ದು. ದಾಖಲೆ ಕೊಡಿ ಅಂದರೆ ದುಡ್ಡು ಕೊಡಲು ಸಾಧ್ಯವಾ? ಈ ಪೆನ್ಡ್ರೈವ್ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ. ಪೆನ್ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.
ಕಾಂಗ್ರೆಸ್ಸಿಗರು ಇನ್ನೂ ಕೆಲ ವಿಕೆಟ್ ಬೀಳಲಿ ಅಂತಾ ಹೇಳುತ್ತಿದ್ದಾರೆ. ನಾನು ಪ್ರಚೋದನೆಗೆ ಒಳಗಾಗಲ್ಲ ಎಂದು ಹೆಚ್.ಡಿಕೆ ತಿಳಿಸಿದರು.
Key words: pendrive- Release -congress- Former CM- H.D.Kumaraswamy