ಮೈಸೂರು, ಏಪ್ರಿಲ್ 25, 2021 (www.justkannada.in): ನಗರದ ಗಲ್ಲಿ ಗಲ್ಲಿಯಲ್ಲೂ ಅಭಯ ಟೀಂ ನ ಕಾರ್ಯಾಚರಣೆ ನಡೆಸುತ್ತಿದ್ದು, ಮುಲಾಜಿಲ್ಲದೇ ತೆರೆದಿದ್ದ ಮಾಂಸದ ಅಂಗಡಿಗಳ ಸೀಜ್ ಮಾಡಲಾಗುತ್ತಿದೆ.
ಪಶುಪಾಲನೆ ಇಲಾಖೆ ಅಧಿಕಾರಿ ಡಾ. ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸರ್ಕಾರದ ಆದೇಶದಂತೆ ಈ ದಿನ ಮಾಂಸ ಮಾರಾಟ ಮಾಡುವಂತಿಲ್ಲ. ಆದರೆ ಕೆಲವೊಂದು ಕಡೆ ಆದೇಶ ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಅಂತಹ ಅಂಗಡಿಗಳನ್ನು ಸೀಜ್ ಮಾಡಲಾಗುತ್ತಿದೆ. ಮುಲಾಜಿಲ್ಲದೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕೆಲವು ಕಡೆ ಪೊಲೀಸರ ಸಹಕಾರದಿಂದ ಅಂಗಡಿಗಳನ್ನು ಸೀಜ್ ಮಾಡಲಾಗಿದೆ ಎಂದು ಡಾ. ಸುರೇಶ್ ತಿಳಿಸಿದ್ದಾರೆ.
ಮತ್ತೊಂದೆಡೆ ಮಾರಾಟ
ಒಂದು ಕಡೆ ಮಾಂಸ ಮಾರಾಟಗಾರರ ಮೇಲೆ ಪಾಲಿಕೆ ಕಾರ್ಯಾಚರಣೆ ಮತ್ತೊಂದೆಡೆ ಎಗ್ಗಿಲ್ಲದೇ ಮಾಂಸ ಮಾರಾಟ ನಡೆಯುತ್ತಿದೆ. ಗುಡ್ಡೆ ಮಾಂಸ ಖರೀದಿಸಲು ಗ್ರಾಹಕರು ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ಪಾಲಿಕೆ ಆದೇಶವನ್ನೂ ಮೀರಿ ಮಾರಾಟದಲ್ಲಿ ತೊಡಗಿದ ಮಾರಾಟಗಾರರು ಹಾಗೂ ಗ್ರಾಹಕರು. ಕೆ.ಜಿ.ಕೊಪ್ಪಲಿನ ಮಾಂಸದಂಗಡಿ ಮುಂದೆ ಜನವೋ ಜನ ಜಮಾಯಿಸಿದ್ದಾರೆ. ಕೊರೊನಾ ಆತಂಕವನ್ನೂ ಕಡೆಗಣಿಸಿ ಮಾಂಸ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದಾರೆ.