ವರ್ಷಾಂತ್ಯದ ಮೋಜು- ಮಸ್ತಿಗೆ ಗಡಿಭಾಗದ ಜನರು ಕಂಗಾಲು, ಆಕ್ರೋಶ

ಮೈಸೂರು,ಡಿಸೆಂಬರ್,30, 2024 (www.jutkannada.in):  ಹೊಸ ವರ್ಚಾಚರಣೆಗೆ ಇನ್ನು ಒಂದು ದಿನ ಬಾಕಿ ಇದ್ದು, ಈ ಮಧ್ಯೆ  ಕೇರಳಿಗರು, ಬೆಂಗಳೂರಿಗರಿಂದ ರಾಜ್ಯದ ಗಡಿಭಾಗದ ಜನರು, ರೈತರಿಗೆ ಸಂಕಷ್ಟ ಎದುರಾಗಿದೆ. ಗಡಿ ಭಾಗದ ಜನ ಕಂಗಾಲಾಗಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಭಾಗಕ್ಕೆ ಯುವ ಸಮೂಹ  ಲಗ್ಗೆ ಇಟ್ಟಿದ್ದು ತಾರಕ ಜಲಾಶಯ ಹಿನ್ನೀರಿನಲ್ಲಿ  ಮದ್ಯ ಸೇವಿಸಿ , ಯುವತಿಯರ ಜೊತೆ ಸೇರಿ  ಮೋಜು ಮಸ್ತಿ ಮಾಡಿದ್ದಾರೆ. ಮದ್ಯ ಸೇವಿಸಿ ಜಮೀನಿನಲ್ಲಿ ಖಾಲಿ ಬಾಟಲಿ ಹೊಡೆದು ಹಾಕಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.

ನಾಗರಹೊಳೆ ಅಭಯಾರಣ್ಯದ ಒಳಗೂ ಕೂಡ ಅಕ್ರಮ ಪ್ರವೇಶ ಮಾಡಿರುವ. ರಾಷ್ಟ್ರೀಯ ಹುಲಿ ಯೋಜನೆಯ ಸೂಕ್ಷ್ಮ ಪ್ರದೇಶದಲ್ಲಿ ಮದ್ಯದ ಖಾಲಿ ಬಾಟಲಿಗಳು ರಾಶಿಗಟ್ಟಲೆ ಬಿದ್ದಿವೆ ಈಯರ್ ಎಂಡ್ ಸಂಭ್ರಮದಲ್ಲಿರುವ ಕೇರಳ‌ ಹಾಗು ಸಿಲಿಕಾನ್ ಸಿಟಿ ಮಂದಿ ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಪ್ರಕೃತಿಗೆ ಧಕ್ಕೆ ತರುತ್ತಿದ್ದಾರೆ. ಕೇರಳದಲ್ಲಿ ಮದ್ಯ ಸಿಗದ ಕಾರಣ ಮೈಸೂರು ಗಡಿ ಭಾಗಕ್ಕೆ  ಆಗಮಿಸಿ ಕಂಠಪೂರ್ತಿ ಕುಡಿದು ಮೈಮೇಲೆ ಪ್ರಜ್ಞೆ ಇಲ್ಲದಂತೆ ಯುವ ಸಮೂಹ ಓಡಾಡಿದ್ದು, ಕುಡಿದ ಖಾಲಿ ಮದ್ಯದ ಬಾಟಲಿಗಳನ್ನ ಜಮೀನಿನಲ್ಲಿ ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ.

ಬಾಟಲಿ‌ ಚೂರುಗಳಿಂದ ಕಾಡಿನಲ್ಲಿರುವ ಹುಲಿ, ಆನೆ, ಚಿರತೆ,‌ ಜಿಂಕೆಗಳಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇನ್ನು ಯುವ ಸಮೂಹ ರಾಜಾರೋಷವಾಗಿ ಎಣ್ಣೆ‌ ಹೊಡೆದು ತೂರಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಅರಣ್ಯ ಇಲಾಖೆ, ಅಬಕಾರಿ, ಜಲಮಂಡಳಿ, ಪೊಲೀಸ್ ಇಲಾಖೆಗಳು ಮೌನ  ಹಹಿಸಿದ್ದು, ಹೆಚ್.ಡಿ.ಕೋಟೆ ಭಾಗದಲ್ಲಿ ಅಕ್ರಮ,‌ಅನೈತಿಕತೆ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ‌ ಕುಳಿತಿದ್ದಾರೆ.

Key words: People, border,  angrym end-of-year festivities.