ತುಮಕೂರು,ಜೂ,7,2019(www.justkannada.in): “ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರ. ನೀರುಗಂಟಿ ಕೆಲಸ ಮಾಡೋದೂ ದೇಶ ಸೇವೆ ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರನಾಗಿ ಕೆಲಸ ಮಾಡುತ್ತೆನೆ. ಸಚಿವ ರೇವಣ್ಣ ಗೋರೂರು ಡ್ಯಾಂ ಕೀ ಕೊಟ್ಟರೆ ಕಾವಲುಗಾರನಂತೆ ಕೆಲಸ ಮಾಡುತ್ತೇನೆ ಎಂದು ತುಮಕೂರು ಸಂಸದ ಜಿ.ಎಸ್ ಬಸವರಾಜು ಟಾಂಗ್ ಕೊಟ್ಟರು.
ಬಸವರಾಜು ಸಂಸದರಾಗಲು ಅನ್ಫಿಟ್ ಹಾಗೂ ಹೇಮಾವತಿ ಡ್ಯಾಂ ಕೀ ಬಸವರಾಜುಗೆ ಕೊಡ್ತೀನಿ. ನೀರು ಬಿಡ್ಲಿ ಎಂದು ಸಚಿವ ರೇವಣ್ಣ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ, ಸಂಸದ ಜಿ.ಎಸ್ ಬಸವರಾಜು, ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ. ಅಂದರೆ ನೀರುಗಂಟಿ ಕೆಲಸ ಮಾಡಲೂ ಸಿದ್ದ. ಅನ್ಫಿಟ್ ಅನ್ನುವ ಪದದ ಅರ್ಥ ರೇವಣ್ಣಗೆ ಗೊತ್ತಿಲ್ಲ. ಕೀ ಕೊಡ್ಲಿ ನನಗೆ ಗೊತ್ತಿದೆ ಹೇಗ್ ನೀರ್ ಬಿಡುಸ್ಬೇಕು ಎಂಬುದು. ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಪರಮಾವಧಿ ಮಾಡಲ್ಲ. 17ಟಿಎಂಸಿ ಬದ್ಲಿಗೆ 45 ಟಿಎಂಸಿ ನೀರನ್ನ ಉಪಯೋಗಿಸಿಕೊಂಡು ಎಲ್ಲರಿಗೂ ನಾಮ ಹಾಕಿಕೊಂಡು, ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಸಚಿವ ಎಸ್ ಆರ್.ಶ್ರೀನಿವಾಸ್ ವಿರುದ್ದವೂ ವಾಗ್ದಾಳಿ ನಡೆಸಿದ ಜಿ.ಎಸ್ ಬಸವರಾಜು, ಅವನ್ಯಾರೋ ನಮ್ಮ ಜಿಲ್ಲೆಯ ಕ್ಷೇತ್ರದ ಶಾಸಕನಾಗಿ ನೀರ ಹೇಗ್ ತರ್ತಾರೋ ನೋಡೋಣ ಅಂತಾನಲ್ಲ ಅವನಿಗೆ ಮರ್ಯಾದೆ ಇದ್ರೆ ಹಾಗ್ ಮಾತಾಡ್ತಿರ್ಲಿಲ್ಲ. ಶಾಸಕನಾಗಿ ಒಂದು ಕೆರೆಯನ್ನೂ ತುಂಬಿಸೋಕೆ ಯೋಗ್ಯತೆ ಇಲ್ಲ..ಮಾನಮರ್ಯಾದೆ ಇದ್ದಿದ್ರೆ ಈ ರೀತಿಯಾದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಹರಿಹಾಯ್ದರು.
Key words: #people #district #work #tumakur #MPGSBasavaraju.