ಬೆಂಗಳೂರು,ಜು,31,2019(www.justkannada.in): ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವರ ಕ್ಷೇತ್ರದ ಜನತೆ ಮತ್ತು ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು.
ಕಚೇರಿಗೆ ಆಗಮಿಸಿದ ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದ ಜನರ ಕ್ಷೇಮ ವಿಚಾರಿಸಿದರು. ಸ್ಪೀಕರ್ ಕಚೇರಿಗೆ ಆಗಮಿಸಿದ ಕಾಗೇರಿ ಅವರ ತಾಯಿ, ಮಡದಿ, ಮಗಳು, ಅಣ್ಣ ಕುಟುಂಬದವರು ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಇಂತಹ ಹುದ್ದೆಗೆ ಬಂದಿರುವುದೇ ನಮ್ಮ ಸುದೈವವಾಗಿದೆ. ಚಳವಳಿಗಳ ಮೂಲಕ ತಾವು ಬಂದಿರೋದು. 1990ರ ಸಂದರ್ಭದಲ್ಲಿ ನನ್ನೆಗೆ ಪಕ್ಷದ ಪ್ರದಾನ ಕಾರ್ಯದರ್ಶಿಯಾದೆ. ಬಳಿಕ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಯಡಿಯೂರಪ್ಪ, ಅನಂತ ಕುಮಾರ್ ಅವರ ಆಶೀರ್ವಾದ ದಿಂದ ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು. ನಾನು ಮೊದಲು ಶಾಸಕನಾಗಿದ್ದಾಗ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿದ್ದರು. ಈಗಲೂ ಸಹ ರಮೇಶ್ ಕುಮಾರ್ ಇದ್ದರು. ಸದನಕ್ಕಿರುವಂತಹ ಘನತೆ ಗೌರವ ಎತ್ತಿಹಿಡಿಯಬೇಕಿದೆ. ನಾವೆಲ್ಲರೂ ಬದ್ದತೆಯಿಂದ ಕೆಲಸನಿರ್ವಹಿಸ ಬೇಕಿದೆ. ನಮ್ಮಜವದ್ಬಾರಿ ಅರ್ಥೈಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ದೋಷಗಳಿವೆ. ಸದನದಲ್ಲೆ ಹೆಚ್ಚುಸಮಯ ಕಳೆಯ ಬೇಕು. ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಂಡಿರುವಾಗ. ಹಿಂದುತ್ವ ನಮ್ಮ ಜೀವನ ಪದ್ದತಿ, ಇದನ್ನು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಜನರಿಗೆ ನಾಗರಿಕ ಸೌಲಭ್ಯ ಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಾಮಾನ್ಯ ಜನರ ದ್ವನಿಯಾಗಿ ಕಾರ್ಯನಿರ್ವಹಿಸೋಣ. ಅಧಿಕಾರಿಗಳು ಸರಿಯಾದ ರೀತಿ ಬದ್ದತೆಯಿಂದ ನಡೆದುಕೊಳ್ಳಬೇಕು. ಶವ ಸಂಸ್ಕಾರದ ಹಣ ಇನ್ನು ಜನರಿಗೆ ತಲುಪಿಲ್ಲ. ಈ ನಿಟ್ಟಿನಲ್ಲಿ ಜವದ್ಬಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ, ಅಮಿತ್ ಶಾ. ಜೆಪಿ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾಗೇರಿ ಅವರ ಪತ್ನಿ ಭಾರತಿಹೆಗಡೆ ಮಾತನಾಡಿ, ನನಗೆ ಹೆಚ್ಚು ಖುಷಿ ಅಗ್ತಿದೆ. ಇನ್ನೂ ಹೆಚ್ಚು ಹುದ್ದೆಗಳು ಸಿಗಲಿ. ನಮ್ಮ ಸಹಕಾರ ಅವರಿಗೆ ತುಂಬಾ ಇರುತ್ತೆ. ಹೀಗೆ ಮುಂದುವರೆಯಲಿ ಅವರು ದೇವರು ಒಳ್ಳೆದು ಮಾಡಲಿ ಎಂದರು.
ಕಾಗೇರಿ ಮಗಳು ರಾಜಲಕ್ಷ್ಮಿ ಅಯ್ಯರ್ ಮಾತನಾಡಿ, ತುಂಬಾ ಹೆಮ್ಮೆ ಆಯ್ತು ಹೀಗೆ ಮುಂದುವರೆಯಲಿ ಅವರು. ರಾಜಕೀಯದ ಬಗ್ಗೆ ನಾನು ಅಪ್ಪ ತುಂಬಾ ಮಾತನಾಡುತ್ತೇವೆ. ನಾನು ರಾಜಕೀಯದ ಬಗ್ಗೆ ಏನಾದ್ರು ಕೇಳುತ್ತಿರುತ್ತೇನೆ ಅವಾಗ ಅವರು ಉತ್ತರ ಕೊಡುತ್ತಾರೆ ಎಂದರು.
Key words: People –family-congratulated – new speaker- Vishweshwar Hegde Kageri.