ಬೆಳಗಾವಿ,ಆಗಸ್ಟ್,28,2020(www.justkannada.in): ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ಜಮಾವಣೆಗೊಂಡಿದ್ದು ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ಮರಾಠಿ ಭಾಷಿಕರು ಕಿರಿಕ್ ತೆಗೆದಿದ್ದಾರೆ.
ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧ ವ್ಯಕ್ತಪಡಿಸಿ 200ಕ್ಕೂ ಹೆಚ್ಚು ಮರಾಠಿ ಭಾಷಿಕರು ಶಿವಾಜಿ ಪ್ರತಿಮೆ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಪೀರನವಾಡಿ ಸ್ಥಳಕ್ಕೆ ಪೊಲೀಸ್ ಆಯುಕ್ತ ತ್ಯಾಗರಾಜನ್ ಬೇಟಿ ನೀಡಿದ್ದು ಮರಾಠಿ ಭಾಷಿಕರ ಮನವೊಲಿಕೆಗೆ ಯತ್ನಿಸಿದರು. ಆದರೆ ಪೊಲೀಸ್ ಆಯುಕ್ತರ ಮನವಿಗೂ ಮರಾಠಿ ಭಾಷಿಕರು ಜಗ್ಗಲಿಲ್ಲ ಎನ್ನಲಾಗಿದೆ.
Key words: People- protest – establishment – Sangolli Rayanna- statue-Peranavadi.