ಬೆಳಗಾವಿ,ಡಿಸೆಂಬರ್,5,2020(www.justkannada.in): ಬೆಳಗಾವಿ ಭಾಗದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಪರಿಹಾರ ನೀಡಲು ಬಿಜೆಪಿಗೆ ಆಗಲಿಲ್ಲ. ಜನರ ಸೇವೆ ಬಿಜೆಪಿಯವರ ಆದ್ಯತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು, ವಿಧಾನಸೌಧ, ಗೃಹಕಚೇರಿ ಕೃಷ್ಣ ಬಿಟ್ಟು ಎಲ್ಲೂ ಬರಲಿಲ್ಲ. ಇವರಿಗೆ ಉತ್ತರ ಕರ್ನಾಟಕ ಭಾಗದ ಜನರ ಬಗ್ಗೆ ಕಾಳಜಿ ಇಲ್ಲ. ಒಟ್ಟಾರೇ ಜನರ ಸೇವೆ ಬಿಜೆಪಿಯವರ ಆದ್ಯತೆ ಅಲ್ಲ ಎಂದು ಟೀಕಿಸಿದರು.
ಸುವರ್ಣಸೌಧದಲ್ಲಿ ಅಧಿವೇಶನ ನಡೆಸದಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ‘ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲು ಸುವರ್ಣ ವಿಧಾನನಸೌಧ ನಿರ್ಮಿಸಲಾಯಿತು. ಆದರೆ, ಅದನ್ನು ಆ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಕೊರೋನಾ ನೆಪದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತಿಲ್ಲ. ಅಧಿವೇಶನ ನಡೆಸದಿದ್ರೆ ಮತ್ಯಾಕೆ..? ಅನ್ಯಾಯ ಆಗುತ್ತೆ ಅಂತಾ ಹೇಳಿತ್ತಿದ್ದ ಶಾಸಕರು ಈಗ ಮಾತನಾಡುತ್ತಲೇ ಇಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.
Key words: People- service – not BJP’s- priority- DK Shivakumar