ಬೆಂಗಳೂರು, ಡಿಸೆಂಬರ್ 15, 2021 (www.justkannada.in): ಶರಣಮ್ಮ (೩೩), ಬೆಂಗಳೂರು ನಗರದ ವರ್ತೂರಿನ ಓರ್ವ ನಿವಾಸಿಯಾಗಿದ್ದು ಈಕೆ ಜೀವನೋಪಾಯಕ್ಕಾಗಿ ಮನೆಗೆಲಸವನ್ನು ಮಾಡಿಕೊಂಡಿದ್ದಾರೆ. ಆಗಸ್ಟ್ ೧೮ರಂದು ಈಕೆ ಕೋವಿಡ್ ಎರಡನೇ ಡೋಸ್ ಪಡೆದುಕೊಂಡಿದ್ದರು. ಎರಡು ವಾರಗಳ ನಂತರದಲ್ಲಿ ಆಕೆಯ ಮೊಬೈಲ್ ಫೋನ್ ಮುರಿದುಹೋಯಿತು. ಹಲವು ಬಾರಿ ಪ್ರಯತ್ನಿಸಿದ ನಂತರವೂ ಸಹ ಆಕೆಗೆ ತನ್ನ ಮೊಬೈಲ್ ಫೋನ್ ಅನ್ನು ರಿಪೇರಿ ಮಾಡಿಸುವುದು ಸಾಧ್ಯವಾಗಲಿಲ್ಲ. ಸ್ವಲ್ಪ ದಿನಗಳ ನಂತರ ಆಕೆ ತನ್ನ ಸಂಪರ್ಕ ಸಂಖ್ಯೆಯನ್ನು ಬದಲಾಯಿಸಿದರು. ಆದರೆ ಈಗ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಪಡೆಯಲು ಇನ್ನಿಲ್ಲದೆ ಪ್ರಯತ್ನಪಟ್ಟರೂ ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಆಕೆಗೆ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಪ್ರಮಾಣಪತ್ರ ಇಲ್ಲದ ಕಾರಣದಿಂದಾಗಿ ಆಕೆ ತನ್ನ ಕೆಲಸಕ್ಕೆ ಮರಳುವುದು ಸಾಧ್ಯವಾಗಿಲ್ಲ – ಅಥವಾ ಯಾವುದೇ ಸೂಪರ್ ಮಾರುಕಟ್ಟೆಗಳಿಗಾಗಲೀ, ಅಥವಾ ಮನೆಗಲೆಸಕ್ಕೂ ಹೋಗಲಾಗುತ್ತಿಲ್ಲ
ಇದು ಶರಣಮ್ಮ ಒಬ್ಬರ ಕಥೆಯಲ್ಲ. ತಮ್ಮ ಸಂಪರ್ಕ ಸಂಖ್ಯೆಗಳನ್ನು ಬದಲಾಯಿಸಿರುವ ಅನೇಕ ಜನರಿಗೆ ಲಸಿಕೆಯ ಪ್ರಮಾಣಪತ್ರಗಳನ್ನು ಪಡೆಯಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರದೆ ಹೇಗೆ ಪ್ರಮಾಣಪತ್ರವನ್ನು ಪಡೆಯುವುದು ಎಂದು ಗೊತ್ತಾಗದೆ ತೊಂದರೆ ಅನುಭವಿಸುವಂತಾಗಿದೆ.
“ನನ್ನ ಬಳಿ ಇದ್ದಂತಹ ಸಿಂ ಕಾರ್ಡ್ ನಾನು ಮೊದಲು ವಾಸಿಸುತ್ತಿದ್ದಂತಹ ಗ್ರಾಮದ ನನ್ನ ಉದ್ಯೋಗದ ಮಾಲೀಕರ ಹೆಸರಿನಲ್ಲಿತ್ತು. ನಾನು ನನ್ನ ಫೋನನ್ನು ಹಲವು ತಿಂಗಳುಗಳಿAದ ರೀಚಾರ್ಜ್ ಮಾಡಿಸದೇ ಇದ್ದ ಕಾರಣದಿಂದಾಗಿ ನನ್ನ ಸಿಂ ಕಾರ್ಡ್ ಡೀಆ್ಯಕ್ಟಿವೇಟ್ ಆಗಿತ್ತು. ನನಗೆ ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬೇಕು ಎಂದು ಅರಿವಿರಲಿಲ್ಲ. ಆದರೆ ಈಗ ನಾನು ಎಲ್ಲಿಗೆ ಹೋದರೂ ಲಸಿಕೆಯ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ. ನಾನು ಕೆಲವು ಅಪಾರ್ಟ್ಮೆಂಟುಗಳಲ್ಲಿ ಮನೆಗೆಲಸವನ್ನು ಮಾಡುತ್ತಿದ್ದೇನೆ – ಆದರೆ ಈಗ ಪ್ರಮಾಣಪತ್ರವಿಲ್ಲದೆ ನನ್ನನ್ನು ಯಾರೂ ಸಹ ಕಟ್ಟಡದ ಒಳಗೇ ಪ್ರವೇಶಿಸಲು ಬಿಡುತ್ತಿಲ್ಲ. ನನಗೆ ಯಾರೂ ಸಹ ಭವಿಷ್ಯದಲ್ಲಿ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಮಾಣಪತ್ರದ ಒಂದು ಪ್ರತಿಯನ್ನು ತೆಗೆದು ಇಟ್ಟುಕೊಳ್ಳಬೇಕು ಎಂದಾಗಲೀ ಅಥವಾ ಅದು ಮುಖ್ಯ ಎಂದಾಗಲೀ ತಿಳಿಸಿಕೊಡಲಿಲ್ಲ. ನಾನು ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದೆ. ಆದರೆ ಅಲ್ಲಿನ ಅಧಿಕಾರಿಗಳು ನಾನು ಎರಡನೇ ಡೋಸ್ ಅನ್ನು ಎಲ್ಲಿ ತೆಗೆದುಕೊಂಡಿದ್ದೆನೋ ಅದೇ ಪಿಹೆಚ್ಸಿಗೆ ಹೋಗಬೇಕು ಎಂದರು. ನಂತರ ನಾನು ಗುಂಜೂರು ಪಿಹೆಚ್ಸಿಗೆ ಹೋದೆ, ಆದರೆ ಅಲ್ಲಿಯೂ ನನ್ನನ್ನು ಹಿಂದುರಿಗಿ ಕಳುಹಿಸಿಬಿಟ್ಟರು, ನನ್ನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ, ಆ ಒಟಿಪಿ ಇಲ್ಲದೆ ನನಗೆ ಪ್ರಮಾಣಪತ್ರೆ ದೊರೆಯುವುದಿಲ್ಲ ಎನ್ನುತ್ತಾರೆ. ಸಹಾಯ ಕೋರಿ ನಾನು ಹಲವರನ್ನು ಸಂಪರ್ಕಿಸಿದೆ, ಆದರೆ ಯಾರಿಗೂ ಎಲ್ಲಿಂದ ಪ್ರಮಾಣಪತ್ರ ಪಡೆಯಬಹುದು ಎಂಬ ಮಾಹಿತಿಯೇ ಇಲ್ಲ,” ಎಂದು ಶರಣಮ್ಮ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.
ವೈಟ್ಫೀಲ್ಡ್ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವಂತಹ ಮುರಳಿ ಎಂಬ ವೈಕ್ತಿ ಹೇಳುವಂತೆ ಅವರ ಬಳಿ ಮೊಬೈಲ್ ಫೋನ್ ಇಲ್ಲವಂತೆ. ಹಾಗಾಗಿ ಮೊದಲನೆ ಡೋಸ್ ಲಸಿಕೆ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತನ್ನ ಸ್ನೇಹಿತ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಯಿತಂತೆ.
“ನನಗೆ ಪ್ರಮಾಣಪತ್ರ ಇಷ್ಟು ಮುಖ್ಯ ಎಂದು ಗೊತ್ತೇ ಇರಲಿಲ್ಲ. ನಾನು ಕೇವಲ ಲಸಿಕೆ ಪಡೆಯುವುದಷ್ಟೇ ಮುಖ್ಯ ಎಂದು ತಿಳಿದಿದ್ದೆ. ನನಗೆ ಒಂದು ಅಪಘಾತವಾಗಿತ್ತು, ಹಾಗಾಗಿ ನಾನು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ, ಅಲ್ಲಿ ನನಗೆ ಟಿಟಿ ಲಸಿಕೆ ನೀಡಿದರು, ನಾನು ಅದನ್ನೇ ಕೋವಿಡ್ ಲಸಿಕೆಯ ಎರಡನೇ ಡೋಸ್ ಎಂದುಕೊಂಡಿದ್ದೆ. ಬಹಳ ಸಮಯದವರೆಗೂ ನನಗೆ ಲಸಿಕೆಯ ಎರಡನೇ ಡೋಸ್ ಪಡೆಯಬೇಕು ಎಂದೇ ಗೊತ್ತಾಗಲಿಲ್ಲ. ಕೆಲವು ಸಮಯದ ನಂತರ ನನಗೆ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ್ದು ಟಿಟಿ ಲಸಿಕೆ ಎಂದು ಯಾರೋ ತಿಳಿಸಿದರು. ಹಾಗಾಗಿ, ನಾನು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಮತ್ತೊಬ್ಬರ ಮೊಬೈಲ್ ಸಂಖ್ಯೆಯ ಮೂಲಕ ಹೆಸರನ್ನು ನೋಂದಾಯಿಸಿಕೊಂಡಿದ್ದೇನೆ. ಆದರೆ ಆತ ಈಗ ತನ್ನ ಸ್ವಂತ ಊರಿಗೆ ಮರಳಿದ್ದಾನೆ. ಹಾಗಾಗಿ ಈಗ ನನ್ನ ಬಳಿ ಲಸಿಕೆಯ ಪ್ರಮಾಣಪತ್ರವೇ ಇಲ್ಲ. ಈಗ ನಾನು ಎಲ್ಲಿಗೆ ಹೋದರೂ ಎಲ್ಲರೂ ನನಗೆ ಪ್ರಮಾಣಪತ್ರ ಕೊಡುವಂತೆ ಕೇಳುತ್ತಿದ್ದಾರೆ. ಆದರೆ ನನ್ನ ಸ್ವಂತ ಮೊಬೈಲ್ ಸಂಖ್ಯೆ ಇಲ್ಲದೆಯೇ ಪ್ರಮಾಣ ಪತ್ರ ಹೇಗೆ ಪಡೆಯುವುದು ಎಂದು ಗೊತ್ತಾಗುತ್ತಿಲ್ಲ,” ಎಂದರು.
ಸಾರ್ವಜನಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರ ಪ್ರಕಾರ, ಅನೇಕ ಜನರು ಕೋವಿಡ್ ಲಸಿಕೆ ಪ್ರಮಾಣಪತ್ರ ಪಡೆಯಲು ಪಿಹೆಚ್ಸಿಗಳಿಗೆ ಬರುತ್ತಿದ್ದಾರಂತೆ. ಆದರೆ ಮೊಬೈಲ್ ಫೋನ್ಗಳಿಲ್ಲದಿರುವ ಕಾರಣದಿಂದಾಗಿ, ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಒಟಿಪಿ ಸೃಷ್ಟಿಸಲಾಗದೆ ಅರ್ಯಾದರಿಗೂ ಸಹಾಯ ಮಾಡಲಾಗುತ್ತಿಲ್ಲ ಎಂದು ತಿಳಿಸುತ್ತಾರೆ.
“ಅನೇಕರು ತಮ್ಮ ಸಂಪರ್ಕ ಸಂಖ್ಯೆಯನ್ನು ಬದಲಾಯಿಸಿದ್ದಾರೆ ಹಾಗೂ ಇನ್ನೂ ಅನೇಕರು ತಾವು ಡೌನ್ಲೋಡ್ ಮಾಡಿಕೊಂಡಿದ್ದಂತಹ ಕೋವಿಡ್ ಲಸಿಕಾ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಅನೇಕರು ಸಹಾಯ ಕೋರಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕೆಲವರ ಹೆಸರನ್ನು ಮರುನೋಂದಣಿ ಮಾಡಿಕೊಂಡು ಕೆಲವರಿಗೆ ಸಹಾಯ ಮಾಡಿದ್ದೇವೆ. ಆದರೂ ಸಹ ಸಂಪರ್ಕ ಸಂಖ್ಯೆ ಇಲ್ಲದಿರುವಂತಹವರಿಗೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಡುವುದು ಕಷ್ಟವೇ,” ಎಂದು ವಿವರಿಸಿದರು.
ಈ ಸಂಬಂಧ ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ. ಬಾಲಸುಂದರ್ ಎ.ಎಸ್. ಅವರನ್ನು ಸಂಪರ್ಕಿಸಿದಾಗ ಅವರು, ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು, ಸಹಾಯದ ಅಗತ್ಯವಿರುವವರು ಬಿಬಿಎಂಪಿಯ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
“ನೋಂದಾಯಿತ ಸ್ವಂತ ಮೊಬೈಲ್ ಸಂಖ್ಯೆ ಇಲ್ಲದಿರುವಂತಹವರು ಲಸಿಕೆಯ ಪ್ರಮಾಣಪತ್ರವನ್ನು ಪಡೆಯಲು ಆಧಾರ್ ಕಾರ್ಡ್ನ ಪ್ರತಿಯನ್ನು ಒದಗಿಸಬೇಕಾಗುತ್ತದೆ. ತಮ್ಮ ತಮ್ಮ ಲಸಿಕಾ ಪ್ರಮಾಣಪತ್ರಗಳ ಪ್ರತಿಗಳನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಡೌನ್ಲೋಡ್ ಮಾಡಿ ‘ಸೇವ್’ ಮಾಡಿ ಇಟ್ಟುಕೊಳ್ಳುವಂತೆ, ಅಥವಾ ಮುದ್ರಿತ ಪ್ರತಿಯೊಂದನ್ನು ತಮ್ಮ ಬಳಿ ಯಾವಾಗಲೂ ಇಟ್ಟುಕೊಂಡಿರುವಂತೆ ಸಾರ್ವಜನಿಕರಿಗೆ ತಿಳಿಸುವಂತೆ ನಾವು ಎಲ್ಲಾ ಪಿಹೆಚ್ಸಿಗಳಿಗೂ ತಿಳಿಸಿದ್ದೇವೆ,” ಎಂದು ಬಾಲಸುಂದರ್ ತಿಳಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: People- struggling – get – covid vaccine- certificate