ಬೆಂಗಳೂರು, ಜೂನ್ 22, 2022 (www.justkannada.in): ರಾಯರ್ಸ್ ಇನ್ಸ್ ಟಿಟ್ಯೂಟ್ ಡಿಜಿಟಲ್ ನ್ಯೂಸ ರಿಪೋರ್ಟ್ 2022ರ ವರದಿಯೊಂದರ ಪ್ರಕಾರ, ದೇಶದಲ್ಲಿ ನಡೆಸಿದ ಸಮೀಕ್ಷೆಯೊಂದರ ಪೈಕಿ ಅಂದಾಜು ಅರ್ಧದಷ್ಟು ಜನರಲ್ಲಿ ಸುದ್ದಿಗಳ ಬಗೆಗಿನ ವಿಶ್ವಾಸ ಕಡಿಮೆಯಾಗಿರುವುದು ಬಹಿರಂಗಗೊಂಡಿದೆ. ಅದರಲ್ಲಿಯೂ ಯುವ ಜನರು ಸುದ್ದಿಗಳಿಂದ ದೂರ ಸರಿಯುತ್ತಿದ್ದಾರೆ.
ಮುಂದುವರೆದು, ಸುದ್ದಿಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಮಾಧ್ಯಮಗಳಿಂದ ದೂರ ಸರಿಯುತ್ತಿರುವ ಜನರು ಟಿಕ್ ಟಾಕ್ನಂತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ಸಮೀಕ್ಷೆ ನಡೆಸಿದ ಒಟ್ಟು ಜನಸಂಖ್ಯೆಯ ಪೈಕಿ ಸುಮಾರು 43%ರಷ್ಟು ಜನರು, ವಿಶೇಷವಾಗಿ ಕೋವಿಡ್-19 ಅಥವಾ ರಾಜಕೀಯ ಈ ಎರಡು ಸುದ್ದಿಗಳನ್ನೇ ಸುದ್ದಿವಾಹಿನಿಗಳಲ್ಲಿ ಪದೇ ಪದೇ ನೋಡಿ, ನೋಡಿ ಬೇಸರಗೊಂಡು ಸುದ್ದಿ ವಾಹಿನಿಗಳಿಂದಲೇ ದೂರ ಸರಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ವಾಟ್ಸಪ್ ಮತ್ತು ಯೂಟ್ಯೂಬ್ ಗಳು ಎಲ್ಲಕ್ಕಿಂತ ಮೆಚ್ಚಿನ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿ ರೂಪುಗೊಂಡಿವೆ.
ಸುದ್ದಿ ಮೂಲ: ದಿ ಹಿಂದೂ
Key words: people -turning away-from- news.